ಫೆಡರರ್ ಗೆ 10ನೇ ಸ್ವಿಸ್ ಓಪನ್ ಗರಿ

ಫೆಡರರ್ ಗೆ 10ನೇ ಸ್ವಿಸ್ ಓಪನ್ ಗರಿ

ಸೆಲ್, ಅ.28 : ಸ್ವಿಜರ್ ಲೆಂಡ್ ಟೆನಿಸ್ ದಂತಕತೆ ರೋಜರ್ ಫೆಡರರ್ ಅವರು ಫೈನಲ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನಾರ್ ಅವರನ್ನು ಮಣಿಸಿ ವೃತ್ತಿ ಜೀವನದ 10ನೇ ಸ್ವಿಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ವಿಶ್ವದ ಮೂರನೇ ಶ್ರೇಯಾಂಕಿತ 6-2, 6-2 ನೇರ ಸೆಟ್ ಗಳಲ್ಲಿ ಆಸ್ಟ್ರೇಲಿಯಾ ಆಟಗಾರನ ವಿರುದ್ಧ ಗೆದ್ದು ವೃತ್ತಿ ಜೀವನದ 103ನೇ ಸಿಂಗಲ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡರು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ನಾಲ್ಕನೇ ಪ್ರಶಸ್ತಿ ತನ್ನದಾಗಿಸಿಕೊಂಡರು. ತವರು ಅಭಿಮಾನಿಗಳ ಎದುರು ಕಣಕ್ಕೆ ಇಳಿದ ರೋಜರ್ ಫೆಡರರ್ ಅವರು 20ರ ಪ್ರಾಯದ ಆಟಗಾರನ ಎದುರು ಆಕ್ರಮಣಕಾರಿ ಪ್ರದರ್ಶನ ತೋರಿದರು. 20 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತನ ಆಟಗಾರ ಆಟ ನೆರೆದಿದ್ದ ಸಾವಿರಾರು ಅಭಿಮಾನಿಗಳ ಪ್ರೀತಿಗೆ ಭಾಜನರಾದರು.

ಫ್ರೆಶ್ ನ್ಯೂಸ್

Latest Posts

Featured Videos