10 ದಿವಸ ಅಮೇರಿಕಾಕ್ಕೆ ಸಿಎಂ ಪ್ರವಾಸ

10 ದಿವಸ ಅಮೇರಿಕಾಕ್ಕೆ ಸಿಎಂ ಪ್ರವಾಸ

ಬೆಂಗಳೂರು, ಜೂ.28 : ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮುಕ್ತಾಯದ ಬಳಿಕ, ಇಂದಿನಿಂದ 10 ದಿವಸ ಅಮೇರಿಕಾಕ್ಕೆ ಖಾಸಗಿ ಪ್ರವಾಸ ಮಾಡಲಿದ್ದಾರೆ ಎಂದು ಸಚಿವಾಲದ ಮೂಲಗಳಿಂದ ತಿಳಿದು ಬಂದಿದೆ. ಅಮೆರಿಕಾದ ನ್ಯೂಜೆರ್ಸಿ ಆದಿಚುಂಚನಗಿರಿಯ ಮಠದ ಶಾಖಾ ಮಠದಲ್ಲಿ ನಿರ್ಮಿಸಿರುವ ಕಾಲಭೈರವೇಶ್ವರ ದೇವಸ್ಥಾನದ ದೇಗುಲ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಜುಲೈ 4ರಂದು ಅಮೆರಿಕ ಒಕ್ಕಲಿಗರ ಪರಿಷತ್ತಿನ ಸಮಾವೇಶ ಕೂಡ ನಡೆಯಲಿದ್ದು, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಜುಲೈ 7ಕ್ಕೆ ಅಮೇರಿಕಾದಿಂದ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ಸಚಿವಾಲಯ ಮೂಲಗಳಿಂದ ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos