ನಕಲಿ ಐ.ಎಫ್.ಎಸ್. ಅಧಿಕಾರಿಣಿ ಝೋಯಾ ಖಾನ್ ಬಂಧನ

  • In Crime
  • April 5, 2019
  • 151 Views
ನಕಲಿ ಐ.ಎಫ್.ಎಸ್. ಅಧಿಕಾರಿಣಿ ಝೋಯಾ ಖಾನ್ ಬಂಧನ

ಗ್ರೇಟರ್ ನೋಯ್ಡಾ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಐಎಫ್ಎಸ್ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಪೊಲೀಸರಿಗೆ ವಂಚಿಸಿ ಸಿಕ್ಕಿಬಿದ್ದ ಘಟನೆ ನೋಯ್ಡಾದಲ್ಲಿ ನಡೆದಿದೆ. ಅಧಿಕಾರಿಯ ಸೋಗಿನಲ್ಲಿ ಐಷಾರಾಮಿ ಬದುಕು ನಡೆಸುತ್ತಿದ್ದುದ್ದಲ್ಲದೆ, ಪೊಲೀಸರ ಬೆಂಗಾವಲು ಸೇವೆ ಪಡೆದುಕೊಂಡಿದ್ದ ಮಹಿಳೆಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಝೋಯಾ ಖಾನ್ ತಾನು ಐಎಫ್‍ಎಸ್‍ ಅಧಿಕಾರಿಯಾಗಿದ್ದು, ವಾಷಿಂಗ್‍ಟನ್ ಡಿಸಿಯಲ್ಲಿ ಭದ್ರತಾ ಮಂಡಳಿಯಲ್ಲಿ ನ್ಯೂಕ್ಲಿಯರ್ ಪಾಲಿಸಿ ಆಫೀಸರ್ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ಲು. ಅಲ್ಲದೆ ನಕಲಿ ವಿಸಿಟಿಂಗ್ ಕಾರ್ಡ್ ಕೂಡಾ ಹೊಂದಿದ್ಲು. ಜೊತೆಗೆ ನಕಲಿ ಸರ್ವರ್ ಗಳನ್ನು ಬಳಸಿಕೊಂಡು ಝೋಯಾ ಪೊಲೀಸರಿಗೆ ಮೇಲ್ ಮಾಡಿ, ಬೆಂಗಾವಲು ಸೇವೆಯನ್ನು ಪಡೆದುಕೊಳ್ತಿದ್ದಳು. ಅಲ್ಲದೆ ತನ್ನ ಬಳಿಯಿದ್ದ ಐಶಾರಾಮಿ ಕಾರುಗಳಿಗೆ ನೀಲಿ ಬಣ್ಣದ ದೀಪಗಳನ್ನು ಅಳವಡಿಸಿಕೊಂಡಿದ್ಲು. ಅನುಮಾನ ಬಂದ ಪೊಲೀಸರು ತನಿಖೆ ನಡೆಸಿದಾಗ ಝೋಯಾ ಖಾನ್ ನಕಲಿ ಅಧಿಕಾರಿ ಎಂದು ತಿಳಿದು ಬಂದಿದೆ. ನಂತರ ಆಕೆ ಮತ್ತು ಆಕೆಯ ಪತಿ ಹರ್ಷನನ್ನು ಬಂಧಿಸಿರುವ ಪೊಲೀಸರು, ಅವರಿಂದ ಬೆಂಜ್‍, ಎಸ್‍ಯುವಿ ಕಾರು, ವಿಶ್ವಸಂಸ್ಥೆ ಲೋಗೋಗಳು, ಒಂದು ನಕಲಿ ಪಿಸ್ತೂಲ್ ಮತ್ತು ವಾಕಿಟಾಕಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos