ಹೀರೊ ಅನುಪಮ್ ಅಭಿನಯದ ಸಿನಿಮಾ ಕಲೆಕ್ಷನ್ ನಲ್ಲಿ ಜೀರೊ..

ಹೀರೊ ಅನುಪಮ್ ಅಭಿನಯದ ಸಿನಿಮಾ ಕಲೆಕ್ಷನ್ ನಲ್ಲಿ ಜೀರೊ..

ನಟ ಅನುಪಮ್ ಖೇರ್ ಅಭಿನಯದ “ದಿ ಆಕ್ಸಿಡೆಂಟಲ್ ಪ್ರ್ಯೆಮ್ ಮಿನಿಸ್ಟರ್” ಚಿತ್ರವು ಕಲೆಕ್ಷನ್ ನಲ್ಲಿ ತೀರಾ ಹಿಂದೆ ಬಿದ್ದಿದೆ. ಕಳೆದ ವಾರವಷ್ಟೇ ತರೆಕಂಡ ಈ ಚಿತ್ರವು ಇದುವರೆಗೂ ಕೇವಲ 15.50 ಕೋಟಿ ಮಾತ್ರ ಕಲೆಕ್ಷನ್ ಮಾಡಿದೆ. ಬಹು ನಿರೀಕ್ಷೆ ಹುಟ್ಟುಹಾಕಿದ್ದ ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿ ಕುರಿತಾದ ಚಿತ್ರ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಬಿಡುಗಡೆಗೂ ಮುನ್ನ ವಿವಾದದ ಕೇಂದ್ರಬಿಂದು ಆಗಿತ್ತು. ಟ್ರೈಲರ್ ರಿಲೀಸ್ ಆದಾಗಲೇ ದೇಶದ ಮೂಲೆ ಮೂಲೆಯಲ್ಲೂ ಈ ಚಿತ್ರ ಕಾಂಟ್ರವರ್ಸಿಯ ಕಿಡಿ ತಗುಲಿಸಿತ್ತು. ಇದೀಗ ತೆರೆಗೆ ಬಂದ್ಮೇಲೆ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಪ್ರೇಕ್ಷರನ್ನು ಸೆಳೆಯುವಲ್ಲಿ ವಿಫಲವಾಗಿದೆ.

ಈ  ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಕ್ಷರಶಃ ಸೋತಿದೆ. ಔಟ್ ಅಂಡ್ ಔಟ್ ಪೊಲಿಟಿಕಲ್ ಡ್ರಾಮಾ ಆಗಿರುವ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ ಪ್ರೇಕ್ಷಕರನ್ನು ಇಂಪ್ರೆಸ್ ಮಾಡಿಲ್ಲ. ಮೇಲಾಗಿ, ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’, ‘ಸಿಂಬಾ’ ಮತ್ತು ‘ಕೆ.ಜಿ.ಎಫ್’ ಚಿತ್ರಗಳಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿರುವ ಚಿತ್ರವಾಗಿದೆ. ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಪುಸ್ತಕವನ್ನು ಆಧರಿಸಿ ತಯಾರಾದ ಚಿತ್ರ ಇದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos