5ನೇ ಗ್ಯಾರಂಟಿ `ಯುವನಿಧಿ’ಗೆ ಅದ್ದೂರಿ ಚಾಲನೆ.!

5ನೇ ಗ್ಯಾರಂಟಿ `ಯುವನಿಧಿ’ಗೆ ಅದ್ದೂರಿ ಚಾಲನೆ.!

ಬೆಂಗಳೂರು: ರಾಜ್ಯ ಸರ್ಕಾರದ 5ನೇ ಗ್ಯಾರೆಂಟಿ ಯುವನಿಧಿ ಯಾವಾಗ ಕೊಡ್ತಾರೆ ಎಂಬ ಕಾತುರ ಇತ್ತು. ಫೈನಲಿ ಈಗ ಐದನೇ ಗ್ಯಾರಂಟಿ ಕೂಡ ಯಶಸ್ವಿಯಾಗಿ ಚಾಲನೆ ನೀಡಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್‌  ಹಾಲ್‌ ನಲ್ಲಿ ಕಾರ್ಯಕ್ರಮ ನಡೆದಿದೆ. ಪದವಿ ಡಿಪ್ಲೋಮೋ ಮುಗಿಸಿದವರಿಗೆ ನಿರುದ್ಯೋಗದ ಭತ್ಯೆ ನೀಡಲಾಗುತ್ತದೆ. ಇಂದಿನಿಂದ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ಜನವರಿ 12ಕ್ಕೆ ಖಾತೆಗೆ ಹಣ ಬೀಳಲಿದೆ.  2022-23ನೇ ಸಾಲಿನಲ್ಲಿ ಪಾಸಾದ ಪದವಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ನಿರುದ್ಯೋಗದ ಭತ್ಯೆ ನೀಡಲಾಗುತ್ತದೆ. ನೋಂದಣಿ ಆದ ಎರಡು ವರ್ಷಗಳ ಕಾಲ ಮಾತ್ರ ಯೋಜನೆ ಲಾಭ ಸಿಗುತ್ತದೆ. ಪದವಿ ಪಾಸಾದವರಿಗೆ 3000 ಡಿಪ್ಲೋಮೋ ಪಾಸಾದವರಿಗೆ 1500 ನಿರುದ್ಯೋಗದ ಭತ್ಯೆ ನೀಡಲಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos