ಸುದೀಪ್ ನನ್ನು ನೋಡಲು ಯುವಕ ಹಠ

ಸುದೀಪ್ ನನ್ನು ನೋಡಲು ಯುವಕ ಹಠ

ಚಾಮರಾಜನಗರ ,ಆ. 23 : ಸಾಯುವುದಕ್ಕೂ ಮುನ್ನ ಒಮ್ಮೆ ಸುದೀಪ್ ನನ್ನು ನೋಡಲು ಯುವಕನ್ನೊಬ್ಬ ಬಯಸುತ್ತಿದ್ದಾನೆ. ‘’ನಿಮ್ಮನ್ನು ಕಣ್ಣಾರೆ ನೋಡಿದ ಮೇಲೆ ನನ್ನ ಕೊನೆಯ ಉಸಿರು ನಿಲ್ಲಲಿ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೋಡಲು ಕ್ಯಾನ್ಸರ್ ಪೀಡಿತ ಯುವಕ ಹಠ ಹಿಡಿದು ಕುಳಿತಿದ್ದಾರೆ. ಸಿದ್ದರಾಜು ಕ್ಯಾನ್ಸರ್ ಪೀಡಿತ ಯುವಕ. ಸಿದ್ದರಾಜು ಚಾಮರಾಜನಗರದ ನಂಜದೇವನಪುರ ಗ್ರಾಮ. ಸುದೀಪ್ ಅವರ ಅಪ್ಪಟ್ಟ ಅಭಿಮಾನಿ. ಸುದೀಪ್ರನ್ನು ನೋಡಲು ಹಠ ಹಿಡಿದು ಕುಳಿತಿದ್ದಾರೆ.
ಇತ್ತ ಸಿದ್ದರಾಜು ಚಿಕಿತ್ಸೆಗಾಗಿ ವೃದ್ಧ ದಂಪತಿ ಪರದಾಡುತ್ತಿದ್ದಾರೆ. ಸಿದ್ದರಾಜು ಅವರ ತಂದೆ ಹುಟ್ಟು ಕುರುಡರಾಗಿದ್ದು, ಭಿಕ್ಷೆ ಬೇಡಿ ತನ್ನ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ತಂದೆಗೆ ಊರುಗೋಲಾಗಬೇಕಾದ ಮಗ ಕೈ, ಕಾಲು ಸ್ವಾಧೀನ ಕಳೆದುಕೊಂಡು ಕಳೆದ ಒಂದೂವರೆ ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಮಗನನ್ನು ಉಳಿಸಿಕೊಳ್ಳಲು ತಂದೆ-ತಾಯಿ ಕಣ್ಣೀರು ಹಾಕುತ್ತಾ ಸಹಾಯ ಹಸ್ತಕ್ಕಾಗಿ ಅಂಗಲಾಚುತ್ತಿದ್ದಾರೆ.
ಕ್ಯಾನ್ಸರ್ ಕಾಯಿಲೆಯಿಂದ ಸಿದ್ದರಾಜು ಬಳಲುತ್ತಿದ್ದು, ಸಾವಿನ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದಾರೆ. ಅಲ್ಲದೆ ಸುದೀಪಣ್ಣ ಒಮ್ಮೆ ಬಂದು ನನ್ನ ನೋಡಿ. ನಿಮ್ಮ ಕಣ್ಣಾರೆ ನೋಡಿದ ಮೇಲೆ ನನ್ನ ಕೊನೆ ಉಸಿರು ನಿಲ್ಲಲಿ ಎಂದು ಸಿದ್ದರಾಜು ಹಂಬಲಿಸುತ್ತಿದ್ದಾರೆ.
ನನಗೆ ಒಂದೂವರೆ ವರ್ಷದಿಂದ ಸರ್ವಿಕಲ್ ಕ್ಯಾನ್ಸರ್ ಇದೆ. ನಾನು ಚಿಕ್ಕ ವಯಸ್ಸಿನಿಂದ ಸುದೀಪ್ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದೇನೆ.

ಫ್ರೆಶ್ ನ್ಯೂಸ್

Latest Posts

Featured Videos