ಯುವ ಸಿನಿಮಾ ನಾಳೆ ರಾಜ್ಯದಾದ್ಯಂತ ಬಿಡುಗಡೆ

ಯುವ ಸಿನಿಮಾ ನಾಳೆ ರಾಜ್ಯದಾದ್ಯಂತ ಬಿಡುಗಡೆ

ಬೆಂಗಳೂರು: ಯುವ ,ರಾಜಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಯುವ ನಾಳೆ ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಸಾಕಷ್ಟ ನಿರೀಕ್ಷೆ ಮೂಡಿಸದು 350ಕ್ಕೆ ಹೆಚ್ಚು ಚಿತ್ರಮಂದಿರಗಳಲ್ಲಿ ನಾಳೆ ತೆರೆ ಕಾಣಲಿದೆ.

ಸಂತೋಷ್ ಆನಂದ್‌ರಾಮ್ ನಿರ್ದೇಶನದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಚಿತ್ರವು ಕರ್ನಾಟಕದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ 350ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿದೆ.

ಯುವ ಚಿತ್ರದ ಕಥಾಹಂದರವು ಕಾಲೇಜು ಮತ್ತು ಕ್ರೀಡೆಗಳ ಹಿನ್ನೆಲೆಯಲ್ಲಿ ಯುವಕನ ಜೀವನದ ಸುತ್ತ ಸುತ್ತುತ್ತದೆ. ಯುವ ರಾಜ್‌ಕುಮಾರ್ ಅವರು ಫುಡ್ ಡೆಲಿವರಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತಂದೆ-ಮಗನ ಸಂಬಂಧದ ಜಟಿಲತೆಗಳನ್ನು ಸಹ ಒಳಗೊಂಡಿದೆ. ಡ್ರಾಮಾ, ಎಮೋಷನ್ಸ್ ಮತ್ತು ಎಂಟರ್‌ಟೈನ್‌ಮೆಂಟ್ ಮಿಶ್ರಣದ ಭರವಸೆ ನೀಡುತ್ತದೆ.

ಸಂತೋಷ ಆನಂದ್ ರಾಮ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಯುವರಾಜ್ ಕುಮಾರ್ ಮತ್ತು ಸಪ್ತಮಿ ಗೌಡ ಮುಖ್ಯ ಭೂಮಿಯಲ್ಲಿದ್ದು. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣವಿದೆ. ಇನ್ನುಳಿದಂತೆ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಮತ್ತು ಹಿತಾ ಚಂದ್ರಶೇಖರ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos