ರಾಜೀವ್ ‘ಗಾಂಧೀ’ ಕುಟುಂಬದ ವಿರುದ್ಧ ಮೋದಿ ಟೀಕಾಸ್ತ್ರ!

ರಾಜೀವ್ ‘ಗಾಂಧೀ’ ಕುಟುಂಬದ ವಿರುದ್ಧ ಮೋದಿ ಟೀಕಾಸ್ತ್ರ!

ನವದೆಹಲಿ, ಮೇ. 9, ನ್ಯೂಸ್ ಎಕ್ಸ್ ಪ್ರೆಸ್:  ಐಎನ್ಎಸ್ ವಿರಾಟ್ ಯುದ್ಧನೌಕೆಯನ್ನೇ ಗಾಂಧೀ ಕುಟುಂಬ ವೈಯಕ್ತಿಕ ಟ್ಯಾಕ್ಸಿ ರೀತಿಯಾಗಿ ಬಳಸಿಕೊಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಭಾರತೀಯ ಸೇನೆಯೇನು ಪ್ರಧಾನಿ ಮೋದಿ ಅವರ ವೈಯಕ್ತಿಕ ಸ್ವತ್ತಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಚುನಾವಣಾ ರ‍್ಯಾಲಿ  ಉದ್ದೇಶಿಸಿ ಮಾತನಾಡಿದ ಅವರು, ‘ಭಾರತೀಯ ಸೇನೆ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ ಎಂದೆಲ್ಲಾ ಕೂಗಾಡುತ್ತಾರೆ. ಆದರೆ ಯಾರು ಹೀಗೆ ವರ್ತಿಸುತ್ತಾರೋ ಅವರ ತಂದೆ ಮತ್ತು ಅವರ ಕುಟುಂಬವೇ ಐಎನ್ಎಸ್ ವಿರಾಟ್ ನೌಕೆಯನ್ನು ಪರ್ಸನಲ್ ಟ್ಯಾಕ್ಸಿಯಾಗಿ ಬಳಸಿಕೊಂಡಿತ್ತು ಎಂಬುದನ್ನು ಈ ದೇಶ ಮರೆತಿಲ್ಲ. ದೇಶದ ಗಡಿಕಾಯಲು ಇರುವ ಯುದ್ಧ ನೌಕೆಯನ್ನು ವೈಯಕ್ತಿಕ ಟ್ಯಾಕ್ಸಿ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಅದಕ್ಕೆ ಅವಮಾನ ಮಾಡಲಾಗಿದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಕುಟುಂಬ 10 ದಿನಗಳ ಪ್ರವಾಸಕ್ಕೆ ತೆರಳಿದ್ದ ಈ ನೌಕೆಯಲ್ಲಿ ರಾಜೀವ್ ಪತ್ನಿ ಸೋನಿಯಾ ತಾಯಿ ಮತ್ತು ಮಾವ ಸೇರಿದಂತೆ ಹಲವು ವಿದೇಶಿಯರು ಇದ್ದಿದ್ದರು ಎಂದು ಮೋದಿ ಟೀಕಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos