ಮಾಸ್ ಆಗಿ ಎಂಟ್ರಿ ಕೊಟ್ಟ ಯುವ ರಾಜಕುಮಾರ್

ಮಾಸ್ ಆಗಿ ಎಂಟ್ರಿ ಕೊಟ್ಟ ಯುವ ರಾಜಕುಮಾರ್

ಬೆಂಗಳೂರು: ಯುವ ,ರಾಜಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಯುವ ಇಂದು ರಾಜ್ಯದಾದ್ಯಂತ ಬಿಡುಗಡೆಗೆಯಾಗಿದೆ. ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಸಾಕಷ್ಟ ನಿರೀಕ್ಷೆ ಮೂಡಿಸಿತ್ತು.

ಸಂತೋಷ್ ಆನಂದ್‌ರಾಮ್ ನಿರ್ದೇಶನದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಚಿತ್ರವು ಕರ್ನಾಟಕದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದೆ.

ಸಂತೋಷ ಆನಂದ್ ರಾಮ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಯುವರಾಜ್ ಕುಮಾರ್ ಮತ್ತು ಸಪ್ತಮಿ ಗೌಡ ಮುಖ್ಯ ಭೂಮಿಯಲ್ಲಿದ್ದು. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣವಿದೆ. ಇನ್ನುಳಿದಂತೆ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಮತ್ತು ಹಿತಾ ಚಂದ್ರಶೇಖರ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಯುವ’ ಸಿನಿಮಾದ ಮೊದಲಾರ್ಧದಲ್ಲಿ ಯಥೇಚ್ಚವಾಗಿ ಹೊಡಿಬಡಿ ದೃಶ್ಯಗಳು ಕಾಣಿಸುತ್ತವೆ. ಕುಂತಿದ್ದಕ್ಕೆ, ನಿಂತಿದ್ದಕ್ಕೆ ಕಿರಿಕ್ ಆಗುತ್ತವೆ. ಆ ಬಳಿಕ ಶುರುವಾಗೋದು ಫೈಟಿಂಗ್. ಮೊದಲಾರ್ಧ ಬಹುತೇಕ ಕಾಲೇಜಿನಲ್ಲಿ ನಡೆಯೋ ಗ್ಯಾಂಗ್​ವಾರ್​​ಗಳಲ್ಲೇ ಸಾಗುತ್ತದೆ. ದ್ವಿತೀಯಾರ್ಧವನ್ನು ಸಂಪೂರ್ಣವಾಗಿ ಭಾವಾನ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಯುವ ಅವರು ಮೊದಲಾರ್ಧದಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟಂಟ್​ಗಳನ್ನು ಕಲಿತು ಫೈಟ್​ಗಳನ್ನು ಮಾಡಿದ್ದಾರೆ. ಇದಕ್ಕೆ ಅವರು ಹಾಕಿದ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ದ್ವಿತೀಯಾರ್ಧದಲ್ಲಿ ಓರ್ವ ತಂದೆಯ ಮಗನಾಗಿ, ಮಧ್ಯಮವರ್ಗದ ಹುಡುಗನಾಗಿ ಅವರು ಗಮನ ಸೆಳೆಯುತ್ತಾರೆ. ಡೆಲಿವರಿ ಬಾಯ್​​ ಆಗಿ, ಕಾಲೇಜು ಹುಡುಗನಾಗಿ ಹೀಗೆ ಹಲವು ಶೇಡ್​ಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಡ್ಯಾನ್ಸ್​ಗಳಲ್ಲಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಅವರು ಭರವಸೆಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲಲ್ಲಿ.

ಸಂತೋಷ್ ಆನಂದ್​ರಾಮ್ ಅವರು ಫ್ಯಾಮಿಲಿ ಆಡಿಯನ್ಸ್​ನ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ತಂದೆ-ಮಗನ ಸೆಂಟಿಮೆಂಟ್​ನ ಕಟ್ಟಿಕೊಡಲು ಅವರು ಯಶಸ್ವಿ ಆಗಿದ್ದಾರೆ. ಕೆಲವು ದೃಶ್ಯಗಳು ಅಪೂರ್ಣ ಎನಿಸುತ್ತದೆ. ಬೆಂಗಳೂರಿನ ಬ್ಯುಸಿ ರಸ್ತೆಯ ಮಧ್ಯೆ ಕಾರು ನಜ್ಜುಗುಜ್ಜಾಗುವ ಹಾಗೆ, ಎದುರಾಳಿಯ ಕಾಲು ಕೈ ಮುರಿಯುವಂತೆ ಹೊಡೆದರೂ ಆ ಬಗ್ಗೆ ಪೊಲೀಸ್ ಕೇಸ್​ ಆಗಲ್ಲ. ಈ ರೀತಿಯ ಕೆಲವು ಲಾಜಿಕ್​ಗಳು ಕಾಣೆ ಆಗಿವೆ.

ಫ್ರೆಶ್ ನ್ಯೂಸ್

Latest Posts

Featured Videos