ಯುವಕರು ದೇಶ ಕಟ್ಟುವ ತತ್ವಗಳನ್ನು ಅಳವಡಿಸಿಕೊಳ್ಳಬೇಕು

ಯುವಕರು ದೇಶ ಕಟ್ಟುವ ತತ್ವಗಳನ್ನು ಅಳವಡಿಸಿಕೊಳ್ಳಬೇಕು

ಚಿಕ್ಕೋಡಿ, ಜ. 26: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 71ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಮಾನ್ಯ ಉಪ ವಿಭಾಗಾಧಿಕಾರಿ ಯಾದ ರವೀಂದ್ರ ಕರಲಿ೦ಗನ್ನವರ ನೆರವೇರಿಸಿ ಮಾತನಾಡಿದರು.  ಭಾರತ ಸಾರ್ವಭೌಮತೆ, ಸಮಾನತೆ, ಧರ್ಮ ನಿರ್ಪಕ್ಷತೆ ಹೊಂದಿ ಸುಭದ್ರ ಅಭಿವೃದ್ಧಿ ಹೊಂದಿದ್ದ ರಾಷ್ಟ್ರ ಎಣಿಸಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹೇಳಿದರು.

ಭಾರತವು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸುವುದು ವಿಚಾರ ಅಭಿವ್ಯಕ್ತಿ, ನಂಬಿಕೆ ಪೂಜಿಸುವ ಸ್ವತಂತ್ರ್ಯವನ್ನು ಭದ್ರಗೊಳಿಸುವುದಾಗಿದೆ. ಸ್ಥಾನಮಾನ ಮತ್ತು ಅವಕಾಶಗಳನ್ನು ಸಮಾನತೆಗೊಳಿಸುವುದು. ಎಲ್ಲರಲ್ಲಿಯೂ ಭ್ರಾತೃತ್ವ ಭಾವನೆ ಪ್ರೋತ್ಸಾಹಿಸುವ ವ್ಯಕ್ತಿ ಗೌರವ, ದೇಶದಲ್ಲಿ ಏಕತೆ ಮತ್ತು ಸಮಗ್ರತೆ ಕಾಪಾಡಬಹುದಾಗಿದೆ. ಜಗತ್ತಿನಲ್ಲಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ಅಭಿವೃದ್ಧಿಯನ್ನು ಸಾಧಿಸಿದೆ ಎಂದರು.

ಯುವಕರು ದೇಶ ಕಟ್ಟುವ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಉತ್ತಮ ನಾಗರಿಕರಾಗಬೇಕು. ಗಾಂಧೀಜಿ ತತ್ವಗಳ ಆದೇಶದಲ್ಲಿ ಕಲಾವಿಧರು, ಮಕ್ಕಳು ಜ್ಞಾನರ್ಜನೆಯಲ್ಲಿ, ಶಿಕ್ಷಕರು ಜ್ಞಾನ ಮತ್ತು ಮೌಲ್ಯವರ್ಧನೆಯಲ್ಲಿ, ಕೃಷಿಕರು ಉಗುಣಮಟ್ಟದ ಉತ್ಪಣಗಳಲ್ಲಿ, ಜನಪ್ರತಿನಿಧಿಗಳು ಸುಭದ್ರ ನಾಗರಿಕ ವ್ಯವಸ್ಥೆ ತರುವ ನಿಟ್ಟಿನಲ್ಲಿ ತೊಡಗಿಕೊಂಡು ದೇಶದ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದವನ್ನು ಹೋಗಲಾಡಿಸಲು ಪ್ರಯತ್ನ ಮಾಡಬೇಕಿದೆ. ಡಾ. ಬಿ.ಆರ್.ಅಂಬೇಡ್ಕರ ಅವರ ವಿಚಾರದಂತೆ ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಂತೆ ಕಾಣದೇ ಅದೊಂದು ನೈಜವಾಗಿ ರೂಪಿಸಿ ಸಾಮಾಜಿಕ ಮತ್ತು ಆರ್ಥಿಕತೆಯನ್ನು ಸಾಂವಿಧಾನಿಕವಾಗಿ ಮೂಲಕ ಪ್ರಥಮ ಆಧ್ಯತೆಯಾಗಬೇಕೆಂದು ಹೇಳಿದ್ದಾರೆ.ಭಾರತ ಸಮಸ್ತ ನಾಗರಿಕರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರ ಕಿಸಾನ ಸಮ್ಮಾನ ಯೋಜನೆ ರೂಪಿಸಿ ದೇಶದ 14 ಕೋಟಿ ರೈತರಿಗೆ 6 ಸಾವಿರ ಸಹಾಯಧನ ನೀಡುತ್ತಿದೆ. ಜಲಕ್ಷಾಮ ಹೋಗಲಾಡಿಸಲು ಜಲಶಕ್ತಿ ಮಂತ್ರಾಲಯ ಸ್ಥಾಪಿಸಿದೆ. ಸ್ವಚ್ಚ ಭಾರತಕ್ಕಾಗಿ ಹೆಚ್ಚಿನ ಒತ್ತು ನೀಡಿದೆ. ಜನೌಷಧಿ ನೀಡಿದೆ. ರಾಜ್ಯ ಸರ್ಕಾರವು ಕೂಡಾ ಪ್ರವಾಹ ನಿಯಂತ್ರಣ ಮಾಡುವಲ್ಲಿ ಸಫಲ ಕಂಡಿದೆ ಎಂದರು.

ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕನು ಗೌರವಿಸುವ ಮೂಲಕ ತಮ್ಮ ತಮ್ಮ ಕರ್ತವ್ಯ ಅರಿತು  ದೇಶದ ಪ್ರಗತಿಗೆ ಶ್ರಮೀಸಬೇಕು. ಜಗತ್ತಿನಲ್ಲಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿತ್ತಿರುವ ಭಾರತ ಇಂದು ಕೃಷಿ, ವೈಧ್ಯಕೀಯ, ಶೈಕ್ಷಣಿಕ, ಬಾಹ್ಯಾಕಾಶ್ಯ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದೆ. ಕೃಷಿ, ನೀರಾವರಿ, ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಅಭಿವೃದ್ದಿ ಪಥದಲ್ಲಿ ಸಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮೀಸಿದ ವಿಧಾನ ಪರಿಷತ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಜಗತ್ತಿನಲ್ಲಿ ದೊಡ್ಡ ಗಣತಂತ್ರ ವ್ಯವಸ್ಥೆ ಹೊಂದಿರುವ ಭಾರತವು ವಿವಿಧತೆಯಲ್ಲಿ ಏಕತೆ ಕಂಡಿದೆ. ಭಾರತ ರತ್ನ ಡಾ,ಬಿ.ಆರ್.ಅಂಬೇಡ್ಕರ ಸಂವಿಧಾನ ರಚಿಸಿ ಪ್ರತಿಯೊಬ್ಬ ಪ್ರಜೆಗೆ ವಿವಿಧ ಹಕ್ಕುಗಳನ್ನು ನೀಡಿದ್ದಾರೆ. ಗಣತಂತ್ರ ವ್ಯವಸ್ಥೆಯಲ್ಲಿ ನಮ್ಮ ಜವಾಬ್ದಾರಿಗಳನ್ನು ಅರಿತು ನಾವು ಕೆಲಸ ಮಾಡಿದರೆ ಭವ್ಯ ಭಾರತ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣವಾಗಲು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪೋಲಿಸ್, ಎನ್.ಸಿ.ಸಿ, ಭಾರತ ಸೇವಾದಳ ಸೇರಿದಂತೆ ಶಾಲಾ ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನ ಹಾಗೂ ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ತಾ.ಪಂ.ಅಧ್ಯಕ್ಷ ಉರ್ಮಿಳಾ ಪಾಟೀಲ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಡಿಡಿಪಿಐ ಗಜಾನನ ಮನ್ನಿಕೇರಿ, ತಾಲೂಕಾ ಆರೋಗ್ಯಾಧಿಕಾರಿ ಡಾ, ವಿಠ್ಠಲ ಶಿಂಧೆ, ಬಿಇಒ ಬಿ.ಎ.ಮೇಕನಮರಡಿ, ಮುಖ್ಯಾಧಿಕಾರಿ ಎಸ್.ಆರ್.ರೋಗಿ ಮುಂತಾದವರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos