ಜಪಾನ್ ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಯೋಗೇಂದ್ರ

ಜಪಾನ್ ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಯೋಗೇಂದ್ರ

ಏ. 23, ನ್ಯೂಸ್ ಎಕ್ಸ್ ಪ್ರೆಸ್:  ಇಂಗ್ಲೆಂಡ್ ಮತ್ತು ಅಮೆರಿಕದ ವಿವಿಧ ಚುನಾವಣೆಗಳಲ್ಲಿ ನಿಂತು ಪತಾಕೆ ಹಾರಿಸಿದ್ದ ಭಾರತೀಯರು, ಇದೀಗ ಜಪಾನ್ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಜಪಾನ್ ನ ಇಡ್ಗೋವಾ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಮೂಲದ ಯೋಗೇಂದ್ರ ಪುರಾಣಿಕ್ ಚುನಾವಣೆಗೆ ನಿಂತಿದ್ದಾರೆ. 15 ವರ್ಷಗಳಿಂದ ಇಡ್ಗೋವಾ ನಿವಾಸಿಯಾಗಿರುವ ಯೋಗೇಂದ್ರ, ಕಳೆದ 10 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಯೋಗೇಂದ್ರ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ಡೆಮಾಕ್ರಟಿಕ್ ಪಾರ್ಟಿ ಆಫ್ ಜಪಾನ್ ನ ಸಕ್ರಿಯ ಸದಸ್ಯರು. ಇನ್ನು ಯೋಗೇಂದ್ರ ಸ್ಪರ್ಧಿಸಬಯಸಿರುವ ಪ್ರದೇಶದಲ್ಲಿ 4500 ಮಂದಿ ಭಾರತೀಯರು ನೆಲಸಿದ್ದಾರೆ. ಉನ್ನತ ಶಿಕ್ಷಣ ಮುಗಿಸಿದ ಅವರು ಜಪಾನ್ ನ ವಿವಿಧ ಬ್ಯಾಂಕ್ ಗಳಲ್ಲಿ ಕೆಲಸ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos