ದೂರು ನಿರ್ಲಕ್ಷಿಸಿದ ಯಲಹಂಕ ಪೊಲೀಸರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಗರಂ

ದೂರು ನಿರ್ಲಕ್ಷಿಸಿದ ಯಲಹಂಕ ಪೊಲೀಸರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಗರಂ

ಬೆಂಗಳೂರು: ಅಪ್ರಾಪ್ತ ಬಾಲಕಿಯ
ಭ್ರೂಣವನ್ನು ತೆಗೆದ ವೈದ್ಯರ ಮೇಲೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ರಾಜ್ಯ
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ನೀ ಬಾಯಿ ಅವರು ಗರಂ ಆಗಿದ್ದಾರೆ.

ಯಲಹಂಕ ಸಾರ್ವಜನಿಕ ಆಸ್ಪತ್ರೆ ವೈದ್ಯರೊಬ್ಬರು 15 ವರ್ಷದ ಬಾಲಕಿಯ ಭ್ರೂಣವನ್ನು ತೆಗೆದಿದ್ದರು. ಇದನ್ನು ತಿಳಿದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷೀ ಬಾಯಿ ಕಳೆದ ತಿಂಗಳು ದಾಳಿ ಮಾಡಿ, ಯಲಹಂಕ ಠಾಣೆಗೆ ದೂರು ನೀಡಿದ್ದರು.
ದೂರು ನೀಡದ ಬಳಿಕವೂ ಪೊಲೀಸರು ಯಾವುದೇ ರೀತಿ ಕ್ರಮ ಕೈಗೊಳ್ಳದ ಹಿನ್ನೆಲೆ ನಾಗಲಕ್ಷ್ಮೀ ಬಾಯಿ ಗರಂ ಆಗಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಕಾನೂನು ಪ್ರಕಾರ ನ್ಯಾಯಲಯದ ಪರ್ಮಿಷನ್ ಹಾಗೂ ಸ್ಥಳೀಯ ಪೊಲೀಸರ ಉಪಸ್ಥಿತಿ ಮೇರೆಗೆ ಭ್ರೂಣವನ್ನು ತೆಗಯಬೇಕು. ಆದ್ರೆ ಯಲಹಂಕ ಬಳಿ ಇರುವ ವೈದ್ಯರು ಯಾವುದೇ ಕ್ರಮ ಅನುಸರಿಸದೇ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಹಾಗೆ ಆಸ್ಪತ್ರೆಗೆ ಮಹಿಳಾ ಆಯೋಗ ಅಧ್ಯಕ್ಷೆ ದಾಳಿ ನಡೆಸಿದಾಗ ಆಸ್ಪತ್ರೆಯಲ್ಲಿ ರೋಗಿಗಳು, ಗರ್ಭಿಣಿಯರು, ಶಿಶುಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದ ವಿಚಾರ ಬೆಳಕಿಗೆ ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos