ಸ್ವಪಕ್ಷದ ವಿರುದ್ಧ ಮತ್ತೆ ಯತ್ನಾಳ್‌ ಕಿಡಿ

ಸ್ವಪಕ್ಷದ ವಿರುದ್ಧ ಮತ್ತೆ ಯತ್ನಾಳ್‌ ಕಿಡಿ

ಬೆಂಗಳೂರು:  ರಾಜ್ಯದಲ್ಲಿ 4 ಸ್ಥಾನಕ್ಕೆ ಇಂದು ಮತ ಚಲಾವಣೆ ನಡೆದಿದ್ದು, ಮತಚಲಾಯಿಸಿದ ನಂತರ ಮಾತನಾಡಿದ ಶಾಸಕ  ಯತ್ನಾಳ್, ” ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಜೋರಾಗಿದೆ ಎಂದು ಎರಡು ದಿನಗಳ ಹಿಂದೆ ಕೂಡಾ ನಾನು ಹೇಳಿದ್ದೆ. ಬಿಜೆಪಿ ಯಾಕೆ ಕೆಲವೊಂದು ಕ್ಷೇತ್ರದಲ್ಲಿ ಸೋತಿತು, ಯಾರಿಂದ ಸೋತಿತು ಎನ್ನುವುದನ್ನು ಹೇಳಿದ್ದೆ ” ಎಂದು ಪಕ್ಷದ ಕೆಲವು ನಾಯಕರ ವಿರುದ್ದ ಪರೋಕ್ಷವಾಗಿ ಗುಡುಗಿದ್ದಾರೆ.

” ಸೋಮಣ್ಣನವರನ್ನು ಸೋಲಿಸುವಲ್ಲಿ ನಮ್ಮವರ ಪಾತ್ರ ದೊಡ್ಡದಿದೆ, ಪೂಜ್ಯ ತಂದೆಯವರ ಮಗ ನಿಷ್ಟಾವಂತ ಕಾರ್ಯಕರ್ತನೊಬ್ಬನನ್ನು ವರುಣಾ ಮತ್ತು ಚಾಮರಾಜನಗರದಲ್ಲಿ ಬಿಟ್ಟಿದ್ದ. ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ರಾಜಕೀಯದಲ್ಲಿ ಕೆಲವೊಂದು ನಡೆಯಬಾರದ್ದು ನಡೆಯುತ್ತದೆ, ಅದಕ್ಕೆ ನಿತೀಶ್ ಕುಮಾರ್ ವಾಪಸ್ ಎನ್‌ಡಿಎ ಮೈತ್ರಿಕೂಟಕ್ಕೆ ಬರಲಿಲ್ಲವೇ ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos