ಮತ ಕೇಳಲು ಹೋದ ಯತೀಂದ್ರ ಸಿದ್ದರಾಮಯ್ಯಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಮತ ಕೇಳಲು ಹೋದ ಯತೀಂದ್ರ ಸಿದ್ದರಾಮಯ್ಯಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಮೈಸೂರು: ಲೋಕಸಭೆ ಚುನಾವಣಾ ಕಣ ರಂಗೇರುತ್ತಿರೋ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ  ತವರು ಕ್ಷೇತ್ರ ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ. ಮೈಸೂರಿನ ವರುಣಾದಲ್ಲಿ ಯತೀಂದ್ರ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಮಾಡ್ತಿದ್ದ ವೇಳೆ ಗ್ರಾಮಸ್ಥರು ಯತೀಂದ್ರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚುನಾವಣಾ ಬಹಿಷ್ಕಾರ ಹಾಕೋದಾಗಿ ಎಚ್ಚರಿಕೆ ನೀಡಿರುವ ಗ್ರಾಮಸ್ಥರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ಗ್ರಾಮಸ್ಥರು ಕಳೆದ 2 ತಿಂಗಳಿನಿಂದ ಅಹೋರಾತ್ರಿ ಧರಣಿ ಮಾಡ್ತಿದ್ದಾರೆ. ಆದ್ರೆ ಅದಕ್ಕೆ ಸರ್ಕಾರ ಅಥವಾ ಸ್ಥಳೀಯ ನಾಯಕರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಈ ನಡುವೆ ಚಾಮರಾಜನಗರ ಲೋಕಸಭೆ ಅಭ್ಯರ್ಥಿ ಸುನೀಲ್ ಬೋಸ್‌ರ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಮತಯಾಚನೆಗೆ ಬಂದಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಎಲೆಕ್ಷನ್ ಅಂತಾ ನಮ್ಮ ಗ್ರಾಮಕ್ಕೆ ಬಂದಿದ್ದೀರಿ, ಇಲ್ಲಾ ಅಂದ್ರೆ ನಮ್ಮ ಕಷ್ಟ ನಿಮಗೆ ಕೇಳ್ತಾ ಇರ್ಲಿಲ್ಲ ಅಂತಾ ಕಿಡಿಕಾರಿದ್ರು. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಸ್ಥಳದಿಂದ ತೆರಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos