ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಬಂಧನ

ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಬಂಧನ

ನವದೆಹಲಿ, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಉಗ್ರರಿಗೆ ಹಣಸಹಾಯ ನೀಡಿದ ಪ್ರಕರಣ ಸಂಬಂಧ ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ,

ಪ್ರಕರಣ ಸಂಬಂಧ ಅತನ ವಿಚಾರಣೆ ನಡೆಸಬೇಕೆಂದು ತನಿಖಾ ತಂಡ ಅನುಮತಿ ಕೇಳಿದ ಹಿನ್ನೆಲೆಯಲ್ಲಿ ಜಮ್ಮುವಿನ ಎನ್ ಐ ಎ ಕೋರ್ಟ್ ರಾಷ್ಟ್ರೀಯ ತನಿಖಾ ದಳದ ಕಸ್ಟಡಿಗೆ ನೀಡಿದೆ.

ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವಿನ ಜತೆಗೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ಸರಕಾರಿ ಸ್ವತ್ತುಗಳನ್ನು ಹಾನಿಗೊಳಿಸುವುದು ಕಣಿವೆಯಲ್ಲಿ ಸಾಮಾನ್ಯವಾಗಿದೆ. ಈ ಕೃತ್ಯಗಳ ಹಿಂದಿನ ಸಂಚುಕೋರರನ್ನು ಗುರುತಿಸಲು ಎನ್ಐಎ ತನಿಖೆ ನಡೆಸುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos