ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ಕಿಂಗ್‌ ಖಾನ್‌!

ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ಕಿಂಗ್‌ ಖಾನ್‌!

ಬೆಂಗಳೂರು: ನಮ್ಮ ಸ್ಯಾಂಡಲ್ ನಲ್ಲಿ ಅನೇಕ ಟಾಪ್ ನಟರಲ್ಲಿ ಯಶ್ ಕೂಡ ಒಬ್ಬರು ಇವರಿಗೆ ಇಡೀ ದೇಶದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಇವರು ಮಾಡಿದ ಕೆಜಿಎಫ್ ಸಿನಿಮಾ ಅತ್ಯಂತ ದೊಡ್ಡ ಮಟ್ಟದಲ್ಲಿ ಬ್ಲಾಕ್ ಬಸ್ಟರ್ ಅನ್ನು ಕಂಡಿದೆ. ಇದರಿಂದ ಇವರು ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರಗಳ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಪ್ಯಾನ್-ಇಂಡಿಯಾ ಖ್ಯಾತಿಯನ್ನು ಯಶ್ ಗಳಿಸಿದರು. 2022 ರಲ್ಲಿ ರಿಲೀಸ್‌ ಆದ ಕೆಜಿಎಫ್ 2 ಸಿನಿಮಾ 1000 ಕೋಟಿ ಗಳಿಸಿತು. ಆ ಬಳಿಕ ಯಶ್ ಸಾಕಷ್ಟು ಸಮಯ ತೆಗೆದುಕೊಂಡು ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಗೀತು ಮೋಹನ್‌ದಾಸ್ ಅವರು ನಿರ್ದೇಶಿಸುತ್ತಿರುವ ಟಾಕ್ಸಿಕ್ ಸಿನಿಮಾ ಕನ್ನಡದಲ್ಲಿ ತಯಾರಾಗಲಿದೆ. ಇದು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಆಗಲಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ. 2025 ಏಪ್ರಿಲ್ 10 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇದೀಗ ಈ ಸಿನಿಮಾ ಬಗ್ಗೆ ಮತ್ತೊಂದು ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ. ಟಾಕ್ಸಿಕ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಬಾಲಿವುಡ್‌ ಕಿಂಗ್‌ ಖಾನ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಶಾರುಖ್ ಖಾನ್ ಅವರನ್ನು ಇತ್ತೀಚೆಗೆ ಟಾಕ್ಸಿಕ್ ಚಿತ್ರ ತಂಡ ಸಂಪರ್ಕಿಸಿತ್ತು ಎಂದು ಹೇಳಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos