ಯಾರೇ ಓಡಾಡಲಿ ಊರೇ ಕೂಗಾಡಲೀ ನಾನು ಮೂತ್ರ ಮಾಡೋದು ಇಲ್ಲೆ

ಯಾರೇ ಓಡಾಡಲಿ ಊರೇ ಕೂಗಾಡಲೀ ನಾನು ಮೂತ್ರ ಮಾಡೋದು ಇಲ್ಲೆ

ಬೆಂಗಳೂರು, ಆ. 2: ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುವ ಅತ್ಯಂತ ಜನ ನಿಬಿಡ ಕೇಂದ್ರ ಸ್ಥಾನ.

ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೆ ನಗರದ ವಿವಿದ ಮೂಲೆಗಳಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳ ಪ್ರಯಾಣಿಕರು ಸಾರ್ವಜನಿಕರು ಓಡಾಡುವ ಸ್ಥಳ.

ಯಾರೇ ಓಡಾಡಲಿ ಊರೇ ಕೂಗಾಡಲೀ ನನಗೇನೂ ಅಂಜಿಕೆಯಿಲ್ಲ ,ಭಯವಿಲ್ಲ,ಆತಂಕವಿಲ್ಲ ನಾನು ಮೂತ್ರ ಮಾಡೋದು ಇಲ್ಲೆ ಅಂತಾರೆ.

ಮಹಿಳೆಯರು, ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿನಿಯರು ಮೂಗು ಬಾಯಿ ಮುಚ್ಚಿಕೊಂಡು ಓಡಾಡುವಂತಹ ಅಸಹನೀಯ ಪರಿಸ್ಥಿತಿ ನಿರ್ಮಾಣ ಆಗಿದೆ ಮೆಜೆಸ್ಟಿಕ್ ಬಸ್ ನಿಲ್ದಾಣದ ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ.

ಪಕ್ಕದಲ್ಲೇ ಮೂತ್ರ ವಿಸರ್ಜಗೆ ಉಚಿತ ಶೌಚಾಲಯಿದೆ. ಸುತ್ತ ಮುತ್ತಲೂ ಬೇಕರಿ, ಫುಟ್ ಪಾತ್ ಹೋಟೆಲ್‌ ನಲ್ಲಿ ಕಾಲಿಡಲಾಗದಷ್ಟು ಜನ ಕೈಯಲಲ್ಲಿ ಹಿಡಿದು ತಿಂಡಿ ತಿನಿಸುಗಳ ತಿನ್ನುತ್ತಿರುತ್ತಾರೆ ಎನ್ನುವ ಕನಿಷ್ಟ ಪರಿಜ್ಞಾನ ಇಲ್ಲದೆ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದರು ಇಲ್ಲಿನ ಬಿಎಂಟಿಸಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ .

ಬಿಎಂಟಿಸಿ ಸಂಚಾರಿ ನಿಯಂತ್ರಕ ಅಪ್ಪಣ್ಣ ಅವರ ಗಮನಸೆಳೆದು ನಿಮ್ಮ ಮುಂದೆನೆ ಇಂತಹ ಅಸಹ್ಯ ಘಟನೆ ನಡೆಯುತ್ತಿದೆ. ಕ್ರಮ ಜರುಗಿಸದೆ ಸುಮ್ಮನಿದ್ದೀರಾ ಎಂದು ‌ಕೇಳಿದ ಪ್ರಶ್ನೆಗೆ ಇಲ್ಲಿ ಅದೆಲ್ಲ ಕಾಮನ್ ರೀ ನಾವೇನು ಮಾಡಲಿಕ್ಕಾಗಲ್ಲ. ಬಿಬಿಎಂಪಿ ಯವರು ಏನು ದನ ಕಾಯ್ತಾವ್ರ?. 500 ರೂಪಾಯಿ ದಂಡ ಹಾಕ್ತಿವಿ ಅಂತ ಹೇಳಿ ಪತ್ರಿಕೆಗಳಲ್ಲೆಲ್ಲ ಪ್ರಚಾರ ಮಾಡಿಸಿರೂ ಅವರೆ ಇಲ್ಲಿವರೆಗೂ ಒಬ್ಬರಿಗೂ ದಂಡ ಹಾಕಿಲ್ಲ. ಅಧಿಕಾರಿಗಳು ದಿನಾ ನಮ್ಮ ಬಸ್ಸುಗಳಲ್ಲಿ ಪ್ರತಿನಿತ್ಯ ಓಡಾಡುತ್ತಾರೆ. ಕಣ್ಣು ಮುಚ್ಚಿಕೊಂಡು ಓಡಾಡ್ತಾರಾ ಅಂತ ನೇರ ಸವಾಲು ಹಾಕುವ ಮೂಲಕ ಬಿಬಿಎಂಪಿ ಅಧಿಕಾರಿಗಳಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡರು.

ಇದು ಮೆಜೆಸ್ಟಿಕ್ ಬಸ್ ನಿಲ್ದಾಣ ಬಿಎಂಟಿಸಿ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರತ್ತೆ ನಿಮ್ಮ ಮೇಲಧಿಕಾರಿಗಳು ಬಸ್ ನಿಲ್ದಾಣದ ಒಳಗಡೆ ಇರುವ ಶೌಚಾಲಯ ಉಚಿತ ಅವಕಾಶ ಇದ್ದರೂ, ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ನೀವು ನೋಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ನಾವು ಗಲಾಟೆ ಮಾಡ್ತೆವೆ ದಂಡ ಹಾಕ್ತಿವಿ ಅಂತ ಭಯ ಇಡುತ್ತಿದ್ದೇವೆ ಆದರೂ ಕೆಲ ಕಿಡಿಗೇಡಿಗಳು ಸಂಜೆ ವೇಳೆ ಇಂತಹ ಕೃತ್ಯಗಳಲ್ಲಿ ತೊಡಗುತ್ತಾರೆಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos