ಯಜಮಾನನಿಗೆ ಅದ್ದುರಿಯ ಸ್ವಾಗತ

ಯಜಮಾನನಿಗೆ ಅದ್ದುರಿಯ ಸ್ವಾಗತ

ಮಾ,1.ನ್ಯೂಸ್ ಎಕ್ಸ್ ಪ್ರೆಸ್, ಬೆಂಗಳೂರು: ಡಿ ಬಾಸ್ ನಟನೆಯ ಬ್ಲಾಕ್ ಬಾಸ್ಟರ್ ಯಜಮಾನ ಚಿತ್ರ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಬೆಳಿಗ್ಗೆಯಿಂದಲೇ ಚಿತ್ರದ ಪ್ರದರ್ಶನ ಆರಂಭವಾಗಿದ್ದು ಯಜಮಾನನಿಗೆ ಎಲ್ಲೆಡೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇನ್ನು ಎರಡೂವರೆ ವರ್ಷಗಳ ನಂತರ ಡಿ ಬಾಸ ಯಜಮಾನ  ಚಿತ್ರದ  ಮೂಲಕ ಕಂಬ್ಯಾಕ್ ಮಾಡ್ತಾ ಇರೋದ್ರೀಂದ ಅಭಿಮಾನಿಗಳು ಚಿತ್ರವನ್ನು ನೋಡಲು ಜನಸಾಗರದದಂತೆ  ಚಿತ್ರಮಂದಿರದ ಬಳಿ ಜಮಾಯಿಸಿದ್ದಾರೆ. ಈಗಾಗಲೇ ಫಸ್ಟ್ ಶೋ ನೋಡಿರೋ ಅಭಿಮಾನಿಗಳು ಯಜಮಾನನಿಗೆ ಫುಲ್ ಮಾರ್ಕ್ಸ್ ಕೊಟ್ಟು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಚಿತ್ರದ ಪಂಚಿಂಗ್ ಡೈಲಾಗ್, ಮ್ಯಾನರೀಸಂ ನೋಡಿ ಅಭಿಮಾನಿಗಳು ಪುಲ್ ಫಿದಾ ಆಗಿದ್ದು ಥಿಯೇಟರ್ ಮುಂದೆ ಡಿ ಬಾಸ್ ಡಿ ಬಾಸ್ ಅಂತಾ ಜಯದ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.  ಇದೀಗ ಚಿತ್ರಮಂದಿರದ ಮುಂದೆಲ್ಲಾ ಅಭಿಮಾನಿಗಳು ಕಿಕ್ಕೀರಿದು ಸೇರಿದ್ದು  ಚಿತ್ರದ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ನೀಡುತ್ತಿದ್ದು ಸಾರಥಿ ಚಿತ್ರದ ಬಳಿಕ ಯಜಮಾನ ಚಿತ್ರ ಹೊಸ ಇತಿಹಾಸ ಬರೆಯಲಿದೆಂದು ಎಂದು ಅಭಿಮಾನಿಗಳು ಹಾರೈಸಿದರು.

ಫ್ರೆಶ್ ನ್ಯೂಸ್

Latest Posts

Featured Videos