‘ಯಜಮಾನ’ನ ಅಬ್ಬರ.!

‘ಯಜಮಾನ’ನ ಅಬ್ಬರ.!

ಬೆಂಗಳೂರು: ಮೊನ್ನೆಯಷ್ಟೆ ಬರ್ತಡೇ ಆಚರಿಸಿಕೊಂಡ ಡಿ.ಬಾಸ್ ಅಭಿನಯದ ಯಜಮಾನ
ಚಿತ್ರ ಬಿಡುಗಡೆಗೆ ಮಾ. 1ರಂದು ವಿಶ್ವದಾದ್ಯಂತ
500 ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಯಜಮಾನ
ಚಿತ್ರ ಬಿಡುಗಡೆಯಾಗಲಿದೆ. ನಿನ್ನೆಯಿಂದ ಆನ್ಲೈನ್ ಬುಕ್ಕಿಂಗ್ ಆರಂಭಗೊಂಡಿದ್ದು,
ಕೆಲ ಶೋಗಳು ಸೋಲ್ಡ್ ಔಟ್
ಆಗಿವೆ.

ಕನ್ನಡದ
ಚಿತ್ರಗಳು ಮೊದಲು ರಾಜ್ಯದಲ್ಲಿ ಬಿಡುಗಡೆಯಾಗುತ್ತವೆ.
ನಂತರ ಅರಬ್ ರಾಷ್ಟ್ರಗಳಲ್ಲಿ ರಿಲೀಸ್
ಆಗುತ್ತವೆ ಆದರೆ ಡಿ.ಬಾಸ್
ಅಭಿನಯದ ಯಜಮಾನ ಚಿತ್ರ ಮಾ.1ರಂದೇ ಎಲ್ಲಾ ಕಡೆ
ಬಿಡುಗಡೆಯಾಗಲಿದೆ. ದೇಶದ ಪ್ರಮುಖ ನಗರಗಳಾದ
ಮುಂಬೈ, ದೆಹಲಿ, ಪುಣೆ ಸೇರಿದಂತೆ
500 ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಯಜಮಾನನ
ಹವಾ ಶುರುವಾಗಲಿದೆ. ಈ ಮಧ್ಯೆ ಜಾಗತಿಕ
ಚಿತ್ರ ವಿಮರ್ಶೆ ಜಾಲತಾಣ ‘ಐಎಂಡಿಬಿ’
ಪಟ್ಟಿಯಲ್ಲಿ ಯಜಮಾನ ಮೊದಲ ಸ್ಥಾನದಲ್ಲಿದೆ
ಸಲ್ಮಾನ್ ಖಾನ್ ನಿರ್ಮಾಣದ ನೋಟ್
ಬುಕ್ ಚಿತ್ರ 2ನೇ ಸ್ಥಾನ,
ಅಕ್ಷಯ್ ಕುಮಾರ್ ಅಭಿನಯದ ಕೇಸರಿ
3ನೇ ಸ್ಥಾನ ಪಡೆದುಕೊಂಡಿದೆ. ಈ
ಮೂಲಕ ಯಜಮಾನ ಪರಭಾಷಾ ಸಿನಿಮಾಗಳನ್ನು
ಹಿಂದಿಕ್ಕಿದೆ. ಜೊತೆಗೆ ಡಿ.ಬಾಸ್
ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos