ಬೆಳ್ಳಂಬೆಳ್ಳಗೆ ಮತ ಭೇಟೆಗಿಳಿದ ಯದುವೀರ್ ಒಡೆಯರ್

ಬೆಳ್ಳಂಬೆಳ್ಳಗೆ ಮತ ಭೇಟೆಗಿಳಿದ ಯದುವೀರ್ ಒಡೆಯರ್

ಮೈಸೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಿಸಿ ಹೆಚ್ಚಾಗಿದೆ ಅಭ್ಯರ್ಥಿಗಳು ಮತ ಯಾಚಿಸಲು ಮುಂದಾಗಿದ್ದಾರೆ. ಮೈಸೂರು ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಅವರು ಕಣಕ್ಕಿಳಿದಿದ್ದಾರೆ.

ನಾವು ಈಗಾಗಲೇ ಹೇಳಿದಂತೆ ಯದುವೀರ್ ಕೃಷ್ಣದತ್ ಒಡೆಯರ್  ಬಲವಂತದ ರಾಜಕಾರಣಿ ಅಲ್ಲ ಅವರು ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಂಡೇ ಲೋಕಸಭಾ ಚುನಾವಣೆಯಲ್ಲಿ  ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅವರು ನಗರದ ಕುಕ್ಕರಹಳ್ಳಿ ಕೆರೆ ಪ್ರದೇಶದದಲ್ಲಿ ಮತಬೇಟೆ ಕೇಳಿದರು.

ಜನರಿಂದ ತಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳುವ ಯದುವೀರ್ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಅಭಿವೃದ್ಧಿಗೆ ನೀಲಿನಕ್ಷೆ ಕೂಡ ತಯಾರು ಮಾಡಿಕೊಂಡಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಬಹುಸಂಖ್ಯಾತ ಜನ ಬೇಸಾಯವನ್ನು ಅವಲಂಬಿಸಿರುವುದರಿಂದ ರೈತರ ಯೋಗಕ್ಷೇಮದ ಕಡೆ ಹೆಚ್ಚು ಒತ್ತು ಕೊಡಬೇಕಿದೆ ಎಂದು ಅವರು ಹೇಳುತ್ತಾರೆ.

ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಯೋಚನೆಯೂ ಅವರಿಗಿದೆ. ಯದುವೀರ್ ತಾನೊಬ್ಬ ಜನಸಾಮಾನ್ಯ ಅಂತ ಕ್ಷೇತ್ರದಲ್ಲಿ ಓಡಾಡುತ್ತಿದ್ದರೂ ಜನ ತನ್ನನ್ನು ಮಹಾರಾಜಾ ಅಂತ ಪರಿಗಣಿಸುತ್ತಿರುವುದು ಹಿಂದಿನ ಒಡೆಯರ್ ಅರಸರು ಮಾಡಿದ ಉತ್ತಮ ಕೆಲಸಗಳ ಫಲ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos