ಪಾಲಿಕೆ ಪೌರ ಕಾರ್ಮಿಕರ ಊಟದಲ್ಲಿ ಹುಳುಗಳು

ಪಾಲಿಕೆ ಪೌರ ಕಾರ್ಮಿಕರ ಊಟದಲ್ಲಿ ಹುಳುಗಳು

ಬೆಂಗಳೂರು, ಅ. 28: ನಗರವನ್ನು ಸ್ವಚ್ಚವಾಗಿಡುವ ಮೂಲಕ ನಮ್ಮ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರಿಗೆ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಮೂಲಕ ನೀಡುತ್ತಿರುವ ಊಟದಲ್ಲಿ ಹುಳುಗಳು ಪತ್ತೆಯಾಗಿ ಬಿಸಾಡಿರುವ ಘಟನೆ ನಡೆದಿದೆ,

ಪ್ರತಿ ನಿತ್ಯ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ನಿಂದ ಉಚಿತ ಊಟ ವಿತರಿಸಲಾಗುತ್ತಿದ್ದು, ಇಂದು ರಾಮಮೂರ್ತಿನಗರ ವಾರ್ಡ್ ಪೌರ ಕಾರ್ಮಿಕರಿಗೆ ವಿತರಿಸಲಾದ ಪಲಾವ್‌ನಲ್ಲಿ ಹುಳುಗಳು ಪತ್ತೆಯಾಗಿವೆ.

 

ತಿನ್ನುವ ಅನ್ನದಲ್ಲಿ ಹುಳ ಪತ್ತೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪೌರ ಕಾರ್ಮಿಕರು, ಇಂತಹ ಊಟ ಮಾಡುವುದಕ್ಕಿಂತ ಸುಮ್ಮನಿರುವುದೇ ಲೇಸು ಎಂದಿದ್ದಾರೆ. ಪಲಾವ್‌ನಲ್ಲಿ ಹುಳುಗಳು ಪತ್ತೆಯಾಗಿವೆ. ಪ್ರತಿ ನಿತ್ಯ ನೀಡುವ ಊಟದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇರುತ್ತವೆ.

ಒಂದು ದಿನ ಅನ್ನ ಅರ್ಧಂಬರ್ಧ ಬೆಂದಿದ್ದರೆ ಮತ್ತೊಂದು ದಿನ ಬೇರೆಯದೇ ಸಮಸ್ಯೆ ಇರು

ತ್ತದೆ ಎಂದಿದ್ದಾರೆ. ನಮಗೆ ಸರಬರಾಜಾಗುತ್ತಿರುವ ಊಟದಲ್ಲಿ ಸಮಸ್ಯೆ ಇರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೌರ ಕಾರ್ಮಿಕರು ದೂರಿದ್ದಾರೆ.

ನಮ್ಮ ಆರೋಗ್ಯದ ಜತೆ ಈ ರೀತಿಯ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ

. ಪೌರ ಕಾರ್ಮಿಕರಿಗೆ ಪ್ರತಿ ನಿತ್ಯ ಉಚಿತ ಊಟ ನೀಡುತ್ತೇವೆ ಎಂದು ಹುಳು ಹುಪ್ಪಟೆಗಳಿರುವ ಊಟ ನೀಡುವುದಕ್ಕಿಂತ ಪುಕ್ಕಟ್ಟೆ ಊಟದ ಯೋಜನೆಯನ್ನು ನಿಲ್ಲಿಸುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿನಿತ್ಯ ನಗರವನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರ ಆರೋಗ್ಯ ಹದಗೆಡಲು ಬಿಬಿಎಂಪಿ ಅಧಿಕಾರಿಗಳು ಕಾರಣರಾಗಿದ್ದಾರೆ. ಇಂದಿರಾ ಕ್ಯಾಂಟಿನ್‌ನಿಂದ ಪೌರ ಕಾರ್ಮಿಕರಿಗೆ ದಿನನಿತ್ಯ ಸರಬರಾಜಾಗುವ ಊಟ ಅರೆಬರೆ ಬೆಂದಿದ್ದು, ಅದರಲ್ಲಿ ನಿತ್ಯ ಹುಳುಗಳ ದರ್ಶನವಾಗುತ್ತವೆಂದು ಪೌರ ಕಾರ್ಮಿಕರು ತಿಳಿಸಿದ್ದಾರೆ.

ಹಿಂದೆಯೂ ಹಲವು ಭಾರಿ ಊಟದಲ್ಲಿ ಹುಳಗಳು ಪತ್ತೆಯಾಗಿದ್ದು ಕಂಡು ಬಂದಿದ್ದು, ಈ ಬಗ್ಗೆ ಪೌರಕಾರ್ಮಿಕರು ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಊಟದಲ್ಲಿ ಹುಳುಗಳು ಕಂಡು ಬಂದಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಎಚ್ಚೇತ್ತುಕೊಂಡಿಲ್ಲ. ಯಾವುದೇ ಕ್ರಮ ಕೈಗೊಳ್ಳದ ಕಾರಣ ಪೌರ ಕಾರ್ಮಿಕರು ಅನಾರೋಗ್ಯಕ್ಕೀಡಾಗಿ ಪ್ರತಿನಿತ್ಯ ಆಸ್ಪತ್ರೆಗೆ ತಿರುಗುವಂತಾಗಿದೆಯೆಂದು ಪೌರ ಕಾರ್ಮಿಕರ ಅಳಲು ತೋಡಿಕೊಂಡಿದ್ದಾರೆ.

ಪ್ರತಿ ದಿನ ಒಂದಿಲ್ಲೊಂದು ರೀತಿಯ ಸಮಸ್ಯೆಗಳು ಊಟದಲ್ಲಿ ಕಂಡು ಬರುತ್ತಿವೆ. ಒಂದು ದಿನ ಕೊಳೆತ ತರಕಾರಿ ಬಳಸಿದರೆ, ಮತ್ತೊಂದು ದಿನ ಸರಿಯಾಗಿ ಬೆಂದಿರುವುದಿಲ್ಲ. ಸರಿಯಾದ ಸಮಯಕ್ಕೆ ಊಟ ಕೊಡುವುದಿಲ್ಲ. ನಾವು ಕೇಳಿದರೆ ಬೇಕಾದರೆ ಊಟ ಮಾಡಿ ಇಲ್ಲ ಅಂದರೆ ನಡೆಯಿರಿ ಎಂದು ದಬಾಯಿಸುತ್ತಾರೆ. ಎಂದು ನೊಂದ ಪೌರ ಕಾರ್ಮಿಕೆ ಸುಮಿತ್ರ ತಿಳಿದ್ದಾರೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos