ವಿಶ್ವಯೋಗ ದಿನಕ್ಕೆ ಅಡ್ಡಿಪಡಿಸುತ್ತಿರುವ ಪಾಲಿಕೆ ಅಧಿಕಾರಿಗಳು!

ವಿಶ್ವಯೋಗ ದಿನಕ್ಕೆ ಅಡ್ಡಿಪಡಿಸುತ್ತಿರುವ ಪಾಲಿಕೆ ಅಧಿಕಾರಿಗಳು!

ಬೆಂಗಳೂರು, ಜೂ. 19: ಪೀಣ್ಯಾದಾಸರಹಳ್ಳಿ: 190 ದೇಶಗಳಲ್ಲಿ ಮಾಡುವ ಯೋಗಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಇದು ಇಡೀ ಸಮಾಜಕ್ಕೆ ಗುರಿ ನೀಡುವ ಶಕ್ತಿಯಾಗಿದೆ, ಆದ್ದರಿಂದ ಯೋಗವನ್ನು ನೀವು ಪ್ರೀತಿಸಿ, ಭಾರತವನ್ನು ಪ್ರೀತಿಸಿ ನಾವೆಲ್ಲಾ ಭಾರತೀಯರು ಈ ವಿಚಾರದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಬೇಡಿ ಎಂದು ವಾಸ್ಕ್ ಯೋಗಕೇಂದ್ರದ ಯೋಗಗುರು ಉಮಾಮಹೇಶ್ವರ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು .

ನಗರದ ದಾಸರಹಳ್ಳಿ ಸಮೀಪದ ಹಾವನೂರು ಬಡಾವಣೆಯಲ್ಲಿರುವ ವಾಸ್ಕ್ ಯೋಗ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ಸುದ್ದಿ ಗೋಷ್ಟಿಲ್ಲಿ ಮಾತನಾಡಿದ ಅವರು ಜಗತ್ತಿನಾದ್ಯಂತ ಯೋಗವನ್ನು ಒಂದು ಹಬ್ಬವಾಗಿ ಸರ್ಕಾರವೇ ಮುಂದೆ ನಿಂತು ಆಚರಿಸುತ್ತಾರೆ. ಆದೇ ರೀತಿ ನಮ್ಮ ಕೇಂದ್ರದಲ್ಲೂ ಸರಕಾರದ ಯಾವುದೇ ಸಹಾಯವಿಲ್ಲದೆ ಆಚರಿಸಲು ತಯಾರಿ ನಡೆಯುತ್ತಿರುವಾಗ ಸ್ಥಳೀಯ ಬಿಬಿಎಂಪಿ ಆಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ವಾಸ್ಕ್ ಯೋಗ ಕೇಂದ್ರದ ಯೋಗ ಗುರು ಆರೋಪಿಸಿದ್ದಾರೆ.

ಯೋಗಕೇಂದ್ರದಲ್ಲಿ ಜೂನ್ 21ರ ವಿಶ್ವಯೋಗ ದಿನಕ್ಕೆ ಮುಂಚಿತವಾಗಿ 7 ದಿನಗಳ ಕಾಲ ವಾಸ್ಕ್ ಯೋಗ ಕೇಂದ್ರದಲ್ಲಿ “ನಮೋಭಾರತ” ಶೀರ್ಷಿಕೆಯಡಿ ಸಾಂಸ್ಕೃತಿಕ, ಧಾರ್ಮಿಕ, ಬೌದ್ಧಿಕ, ಆಧ್ಯಾತ್ಮಿಕ, ಸತ್ಸಂಗ,ಸಪ್ತಾಹ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಮನರಂಜನೆ ಮೂಲಕ ನೀಡುತ್ತಿದ್ದಾರುವ ಯೋಗ ಕೇಂದ್ರ ಕಾರ್ಯಕ್ರಮ ನಡೆಸಲು ಅನುಮತಿಗಾಗಿ ಸ್ಥಳೀಯ ಪಾಲಿಕೆ ಅಧಿಕಾರಿಗಳಿಗೆ, ಹಾಗೂ ಸುತ್ತ ಮುತ್ತಲಿನ ಐದಾರು ಪೊಲೀಸ್ ಠಾಣೆಗಳಿಗೆ ಅಲೆದಾಡಿದರೂ ಅನುಮತಿ ನೀಡಲು ಮೀನಾ ಮೇಷ ಏಣಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ಸಮಯದಲ್ಲಿ ಮಾತನಾಡುತ್ತಿದ್ದ ಅವರು ವಿಶ್ವ ಯೋಗ ದಿನಕ್ಕೆ ಸ್ವಾಗತ ಕೋರುವ ಬ್ಯಾನರ್ ಮತ್ತು ಬಂಟಿಂಗ್ಸ್ ಹಾಕಲಾಗಿದ್ದು ಪಾಲಿಕೆ ಅಧಿಕಾರಿಗಳ ಸೂಚನೆ ಮೇರೆಗೆ ಪೌರಕಾರ್ಮಿಕರು ಯಾವುದೇ ಸೂಚನೆ ಇಲ್ಲದೇ ಹರಿದುಹಾಕಿ ಅವಮಾನ ಮಾಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಲ್ಲದೇ, ಇದೇ ರೀತಿ ಯೋಗ ಕೇಂದ್ರಕ್ಕೆ ಅಡ್ಡಿ ಉಂಟುಮಾಡಿದರೆ ಮುಂದಿನದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಳೆದ ವರ್ಷದ ಯೋಗ ದಿನದಂದು ಕಣ್ಮರೆಯಾಗಿದ್ದ ವಿಷಯ ನೆನಪು ಮಾಡಿಕೊಂಡ ಯೋಗ ಗುರು ಉಮಾಮಹೇಶ್ವರ ಅವರು ನಾಡಿನದೊರೆಯೇ ವಿಶ್ವಯೋಗ ದಿನಕ್ಕೆ ಸ್ಪಂಧಿಸದಿದ್ದರೆ ಹೇಗೆ ಈ ವರ್ಷವಾದರೂ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ನೀವು ಚಾಲನೆ ನೀಡಿ ಎಂದು ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos