ವರ್ಲ್ಡ್​ ಪ್ರೆಸ್​ ಫೋಟೋ ಪ್ರಶಸ್ತಿ ಗೆದ್ದ ಫೋಟೋ…

ವರ್ಲ್ಡ್​ ಪ್ರೆಸ್​ ಫೋಟೋ ಪ್ರಶಸ್ತಿ ಗೆದ್ದ ಫೋಟೋ…

ಏ. 12, ನ್ಯೂಸ್ ಎಕ್ಸ್ ಪ್ರೆಸ್: ಒಂದು ಫೋಟೋ ಸಾವಿರ ಪದಗಳಿಗೆ ಸಮ ಎನ್ನುವ ಮಾತಿದೆ. ಈ ಫೋಟೋ ಅದಕ್ಕೆ ಸೂಕ್ತ ಸಾಕ್ಷಿ ಎಂದರೆ ಅತಿಶಯೋಕ್ತಿಯಲ್ಲ. ಒಂದೇ ಫೋಟೋದಲ್ಲಿ ಸಾವಿರ ಪದವನ್ನು ಹಿಡಿದಿಟ್ಟ ಈ ಫೋಟೋದಲ್ಲಿ ಕಾಣದ ನೋವಿದೆ. ಈ ವರ್ಷದ ವರ್ಲ್ಡ್​ ಪ್ರೆಸ್​ ಫೋಟೋ ಪ್ರಶಸ್ತಿ ಗೆದ್ದ ಈ ಫೋಟೋ ಸೆರೆಹಿಡಿದಿದ್ದು ಜಾನ್​ ಮೂರೆ ಎನ್ನುವ ಹಿರಿಯ ಛಾಯಾಚಿತ್ರಗಾರ. ತಾಯಿ ಸಾಂಡ್ರಾ ಸ್ಯಾಂಚೆಜ್​​ರಿಂದ ಮಗು ಯನೇಲಾಳನ್ನು ಭದ್ರತಾ ಅಧಿಕಾರಿಗಳು ಬೇರ್ಪಡಿಸುವ ಸಂದರ್ಭದಲ್ಲಿ ಮೂರೆ ಈ ಫೋಟೊವನ್ನು ಕ್ಲಿಕ್ಕಿದ್ದರು. ಈ ಮನಕಲುಕುವ ಫೋಟೋಗೆ ಇದೀಗ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ. ಅಮ್ಮನ ಕಾಲ ಬಳಿ ಅಸಹಾಯಕವಾಗಿ ನಿಂತಿರುವ ಮಗುವಿನ ಮುಖದಲ್ಲಿ ನೋವು, ಭಯ, ಹತಾಶೆ ಎಲ್ಲವೂ ಮಿಳಿತವಾಗಿದೆ. ಅಮ್ಮನನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರೆ ಮಗು ಅಳುತ್ತಾ ದಿಕ್ಕೇ ತೋಚದೆ ನಿಂತಿರುವ ಈ ದೃಶ್ಯ ಕಲ್ಲು ಹೃದಯದ ಮನಸ್ಸಿನವರೂ ಮರುಗುವಂತಿದೆ. ಮೆಕ್ಸಿಕೋ- ಅಮೆರಿಕ ಗಡಿಯ ಮೂಲಕವಾಗಿ ಪ್ರತಿವರ್ಷ ಹಲವಾರು ಮಂದಿ ಅನಧಿಕೃತವಾಗಿ ಅಮೆರಿಕವನ್ನು ಪ್ರವೇಶಿಸುತ್ತಾರೆ. ಈ ವೇಳೆ ಸಿಕ್ಕಿಬಿದ್ದವರನ್ನು ಜೈಲಿಗಟ್ಟಲಾಗುತ್ತದೆ. ಅನಧಿಕೃತವಾಗಿ ಗಡಿ ದಾಟಿ ಬಂದವರಲ್ಲಿ ಮಗು ಹಾಗೂ ತಾಯಿ ಇದ್ದರೆ ಇಬ್ಬರನ್ನೂ ಪ್ರತ್ಯೇಕಿಸಿ ಬೇರೆ ಬೇರೆಯಾಗಿ ಜೈಲು ಶಿಕ್ಷೆ ನೀಡಲಾಗುತ್ತದೆ. ಈ ನಿಯಮ ವಿಶ್ವಮಟ್ಟದಲ್ಲಿ ಸಾಕಷ್ಟು ಪ್ರತಿರೋಧಕ್ಕೂ ಕಾರಣವಾಗಿದೆ. ಫೋಟೋ ಜಾಗತಿಕ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ಮಾತನಾಡಿದ್ದ ಛಾಯಾಗ್ರಾಹಕ ಜಾನ್ ಮೂರೆ, ನಾನು ಆ ಮಗುವಿನ ಕಣ್ಣಲ್ಲಿ ಭಯ ನೋಡಿದೆ. ಆಗ ಮಂಡಿಯೂರಿ ಈ ಚಿತ್ರವನ್ನು ತೆಗೆದಿದ್ದಾಗಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos