ಕಾರ್ಮಿಕರ ಪ್ರತಿಭಟನೆ

ಕಾರ್ಮಿಕರ ಪ್ರತಿಭಟನೆ

ಕೆ.ಆರ್.ಪುರ, ಅ.25: ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ಭದ್ರತೆ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕಳೆದ ಮೂರು ವರ್ಷಗಳಿಂದ ಪಿಎಫ್ ಖಾತೆಗೆ ಹಣ ಹಾಕದೇ ವಂಚಿಸಿರುವ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕು  ಎಂದು ಅಗ್ರಹಿಸಿ  ಕೆ.ಆರ್.ಪುರದ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

ಆರ್.ಟಿ.ನಗರದಲ್ಲಿ ಇರುವ ಪೂಜೆಯಾ ಸೆಕ್ಯುರಿಟಿ ಸರ್ವಿಸ್ ಸಂಸ್ಥೆ ಮೂಲಕ ಮೈಷುಗರ್ ಕಾರ್ಖಾನೆಗೆ ಭದ್ರತಾ ಸಿಬ್ಬಂದಿಯಾಗಿ ನೂರಕ್ಕೂ ಹೆಚ್ಚು ಜನರನ್ನು ಭದ್ರತಾ ಸಿಬ್ಬಂದಿಯಾಗಿ ನೇಮಕ ಮಾಡಲಾಗಿತ್ತು. ಗುತ್ತಿಗೆ ಆಧಾರದಲ್ಲಿ ಕಾರ್ಯ‌ನಿರ್ವಹಿಸುತ್ತಿರುವ ಸಿಬ್ಬಂದಿಗೆ ಪೂಜೆಯಾ ಸೆಕ್ಯುರಿಟಿ ಏಜೆನ್ಸಿ ಭವಿಷ್ಯ ನಿಧಿ ಹಣ ಕಾರ್ಮಿಕರಿಗೆ ವಿಮೆ ಸೌಲಭ್ಯ ನೀಡದೆ ವಂಚಿಸಿದೆ. 01.01.2016 ರಿಂದ 24.09.2019 ರ ವರೆಗೆ ಇಪಿಎಫ್ ಹಣ ಪಾವತಿಸದೆ ಪೂಜೆಯಾ ಸೆಕ್ಯುರಿಟಿ ಏಜೆನ್ಸಿ ಕಂಪನಿ ವಂಚಿಸಿದೆ ಎಂದು ಕಾರ್ಮಿಕರು ಆಳಲು ತೊಡಗಿಕೊಂಡರು.

ಕಳೆದ ಮೂರು ವರ್ಷ ಆರು ತಿಂಗಳಿಂದ ಐವತ್ತಕ್ಕೂ ಹೆಚ್ಚು ಜನರಿಗೆ ಪೂಜ್ಯಯಾ ಸೆಕ್ಯುರಿಟಿ ಏಜೆನ್ಸಿ ಭವಿಷ್ಯ ನಿಧಿ ಕಚೇರಿಗೆ ಭದ್ರತಾ ರಕ್ಷಕರ ಹಣವನ್ನು ಕಟ್ಟದೆ ಮೋಸ ಮಾಡಿದೆ. ಸಂಬಳದ ರಸೀದಿಯನ್ನು ಕೊಡದೇ ಹೆಚ್ಚಿನ ಸಮಯದಲ್ಲಿ ಕೆಲಸ ಮಾಡಿಸಿಕೊಂಡಿರುತ್ತಾರೆ. ಭವಿಷ್ಯ ನಿಧಿ ಕಚೇರಿಯಿಂದ ಹಣ ಬರದೆ ಇರುವ ಬಗ್ಗೆ ವಿಚಾರಿಸಿದರೆ ಕೆಲಸದಿಂದ ಕಿತ್ತು ಹಾಕುತ್ತೇವೆ ಎಂದು ಹೆದರಿಸುತ್ತಾರೆ.

ಪ್ರತಿ ತಿಂಗಳು  ಸಂಬಳದಲ್ಲಿ .ಶೇಕಡಾ 12 ರಷ್ಟು   ಇಪಿಎಪ್ ಹಣ ಕಡಿತಗೊಂಡಿದೆ, ಕಳೆದ ಮೂರು ವರ್ಷದಿಂದ ನಮಗೆ ಇಪಿಎಪ್ ಹಣದಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ಬರಬೇಕು, 30 ಸಾವಿರ ಹಣ ಹಾಕುವ ಮೂಲಕ ಸಂಸ್ಥೆ ಮೋಸ ಮಾಡಿದೆ, ನ್ಯಾಯಯುತವಾಗಿ ಇಪಿಎಪ್ ಹಣ ಹಾಕದೇ ವಂಚಿಸಿರುವ ಸಂಸ್ಥೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುವ ನಾವು ನಮ್ಮ ಸಂಬಳದಲ್ಲಿ ತಿಂಗಳಿಗೆ ಒಮ್ಮೆ ಸಾವಿರಕ್ಕೂ ಹೆಚ್ಚು ಹಣವನ್ನು ಭವಿಷ್ಯ ನಿಧಿ ಕಚೇರಿಗೆ ಹಣ ಕಟ್ಟಲಾಗಿದೆ ಎನ್ನುತ್ತಾರೆ ಆದರೆ ಇದುವರೆಗೆ ನಮ್ಮ ಹಣ ಕೈಸೇರಿಲ್ಲ ಎಂದು ಮಂಡ್ಯದಿಂದ ಬಂದಿರುವ ಕಾರ್ಮಿಕ ಎಂ.ಟಿ.ವೆಂಕಟೇಶ ದೂರಿದರು.

ಕೆ.ಆರ್.ಪುರದ ಭವಿಷ್ಯ ನಿಧಿ ಆಯುಕ್ತರಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.  ದೂರದ ಮಂಡ್ಯದಿಂದ ನಲವತ್ತಕ್ಕೂ ಹೆಚ್ಚು ಕಾರ್ಮಿಕರು ನಗರಕ್ಕೆ ಭೇಟಿ ನೀಡಿ ಆಯುಕ್ತರಿಗೆ ಅಹವಾಲು ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ.  ಕಾರ್ಖಾನೆಯ ವ್ಯವಸ್ಥಾಪಕರಿಗೂ ಹಾಗೂ ಭದ್ರತಾ ಕಂಪನಿಯ ವ್ಯವಸ್ಥಾಪಕರಿಗೂ ನಮ್ಮ ಸಮಸ್ಯೆ ಬಗ್ಗೆ ಕೇಳಿದರೆ ಗಮನಹರಿಸುತ್ತಿಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos