ವನಿತಾ ವಿಶ್ವ ಟಿ20 ಕೂಟ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಜಯಭೇರಿ

ವನಿತಾ ವಿಶ್ವ ಟಿ20 ಕೂಟ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಜಯಭೇರಿ

ಸೈಂಟ್‌ ಲೂಸಿಯಾ: ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ಐಸಿಸಿ ವನಿತಾ ವಿಶ್ವ ಟಿ20 ಕೂಟದ ಸೋಮವಾರದ ಪಂದ್ಯಗಳಲ್ಲಿ ಅನುಕ್ರಮವಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸುಲಭ ಜಯ ಸಾಧಿಸಿದೆ. ಮಳೆಯಿಂದ ತೊಂದರೆಗೊಳಗಾದ ಈ ಪಂದ್ಯದಲ್ಲಿ ಗೆಲ್ಲಲು 16 ಓವರ್‌ಗಳಿಂದ 64 ರನ್‌ ಗಳಿಸುವ ಗುರಿ ಪಡೆದಿದ್ದ ಇಂಗ್ಲೆಂಡ್‌ ತಂಡವು 9.3 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತ್ತು. ಈ ಮೊದಲು ಕ್ರಿಸ್ಟಿ ಗೋರ್ಡಾನ್‌ ದಾಳಿಗೆ ಕುಸಿದ ಬಾಂಗ್ಲಾದೇಶವು 9 ವಿಕೆಟಿಗೆ 76 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಇಂಗ್ಲೆಂಡಿನ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಈ ಪಂದ್ಯದಲ್ಲಿ ನಾನು ಟ್ವೆಂಟಿ20ಗೆ ಪಾದಾರ್ಪಣೆಗೈಯುತ್ತೇನೆಂದು ಭಾವಿಸಿ ರಲಿಲ್ಲ. ಪಂದ್ಯ ನಡೆದಿರುವುದು ಮತ್ತು ಪಾದಾರ್ಪಣಾ ಪಂದ್ಯದಲ್ಲಿ ವಿಕೆಟ್‌ ಕಿತ್ತಿರುವುದು ಖುಷಿ ನೀಡಿದೆ ಎಂದು ಕ್ರಿಸ್ಟಿ ಗೋರ್ಡಾನ್‌ ಹೇಳಿದ್ದಾರೆ. ವಿಂಡೀಸ್‌ ವಿರುದ್ಧದ ಮೊದಲ ಪಂದ್ಯ ದಲ್ಲಿ ಬಾಂಗ್ಲಾ ಕೇವಲ 46 ರನ್ನಿಗೆ ಆಲೌಟಾ ಗಿತ್ತು. ಇಂಗ್ಲೆಂಡ್‌ ವಿರುದ್ಧ 20 ಓವರ್‌ ಆಡಲು ಯಶಸ್ವಿಯಾಗಿದ್ದ ಬಾಂಗ್ಲಾ 76 ರನ್‌ ಪೇರಿಸಿತ್ತು. ನಾಲ್ವರು ಆಟಗಾರ್ತಿಯರು ಶೂನ್ಯಕ್ಕೆ ಔಟಾಗಿದ್ದರೆ ಆರಂಭಿಕ ಆಟಗಾರ್ತಿ ಅಯೇಷಾ ರೆಹಮಾನ್‌ ಗರಿಷ್ಠ 39 ರನ್‌ ಹೊಡೆದಿದ್ದರು.

ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರು ಶ್ರೀಲಂಕಾ ವನ್ನು 7 ವಿಕೆಟ್‌ಗಳಿಂದ ಮಣಿಸಿದರು. ದಕ್ಷಿಣ ಆಫ್ರಿಕಾದ ವೇಗದ ದಾಳಿಗೆ ರನ್‌ ಗಳಿಸಲು ಒದ್ದಾಡಿದ ಶ್ರೀಲಂಕಾ ವನಿತೆಯರು 9 ವಿಕೆಟಿಗೆ 99 ರನ್‌ ಪೇರಿಸಲಷ್ಟೇ ಶಕ್ತರಾದರು. ವೇಗದ ದಾಳಿಯ ವೇಳೆ ದಕ್ಷಿಣ ಆಫ್ರಿಕಾ 19 ವೈಡ್‌ ಎಸೆದಿತ್ತು.; ಶಬಿ°ಮ್‌ ಇಸ್ಮಾಯಿಲ್‌ ಬಿಗು ದಾಳಿ ಸಂಘಟಿಸಿ 10 ರನ್ನಿಗೆ 3 ವಿಕೆಟ್‌ ಕಿತ್ತರು. ಪಂದ್ಯದ ಮಹಿಳೆ ಪ್ರಶಸ್ತಿ ಒಲಿಸಿಕೊಂಡರು. ನಾಯಕಿ ಡೇನ್‌ ವಾನ್‌ ನೀಕೆರ್ಕ್‌ ಮತ್ತು ಮ್ಯಾರಿಝಾನೆ ಕಾಪ್‌ ಅವರ ಉಪಯುಕ್ತ ಆಟ ದಿಂದಾಗಿ ದಕ್ಷಿಣ ಆಫ್ರಿಕಾ 18.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಜಯ ಸಾಧಿಸಿತು. ಅವರಿಬ್ಬರು ಮೂರನೇ ವಿಕೆಟಿಗೆ 67 ರನ್ನುಗಳ ಜತೆಯಾಟ ನಡೆಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos