ಟ್ರಾನ್ಸಿಟ್ ಹಾಸ್ಟೆಲ್‌ನತ್ತ ಮುಖ ಮಾಡದ ಮಹಿಳೆಯರು

ಟ್ರಾನ್ಸಿಟ್ ಹಾಸ್ಟೆಲ್‌ನತ್ತ ಮುಖ ಮಾಡದ ಮಹಿಳೆಯರು

ಬೆಂಗಳೂರು, ಡಿ. 3: ಉದ್ಯೋಗ ಸಂದರ್ಶನ, ವೃತಿಪರ ಕೋರ್ಸ್ಗಳಿಗೆ ಪ್ರವೇಶ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿವಿಧ ಜಿಲ್ಲೆಗಳಿಂದ ಬರುವ ಮಹಿಳೆಯರಿಗಾಗಿ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಟ್ರಾನ್ಸಿಟ್ ಹಾಸ್ಟೆಲ್ ಆರಂಭಿಸಿದ್ದರೂ ಪ್ರವೇಶ ಪಡೆಯುವವರೇ ಇಲ್ಲ. ನಗರದಲ್ಲಿ ಖಾಸಗಿ ಪಿಜಿಗಳಲ್ಲಿ ಉಳಿಯಲು ಸಾವಿರಾರು ರೂ. ವೆಚ್ಚವಾಗುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಹಣ ಭರಿಸುವುದು ಕಷ್ಟ ಎಂಬ ಕಾರಣಕ್ಕೆ ವೃತ್ತಿಪರ ಕೋರ್ಸ್, ಉದ್ಯೋಗ ಸಂದರ್ಶನಕ್ಕೆ ಬಂದಾಗ ಉಳಿದುಕೊಳ್ಳಲು ಇಲಾಖೆ 12 ಮಹಿಳಾ ಟ್ರಾನ್ಸಿಟ್ ಹಾಸ್ಟೆಲ್ ಪ್ರಾರಂಭಿಸಿದೆ.

ಕಳೆದ ಆರು ತಿಂಗಳಲ್ಲಿ ಪ್ರವೇಶ ಪಡೆದವರು ಕೇವಲ 24 ಮಂದಿ. ಒಂಬತ್ತು ಹಾಸ್ಟೆಲ್‌ಗಳಲ್ಲಿ ಒಬ್ಬ ಮಹಿಳೆ ಕೂಡ ಪ್ರವೇಶ ಪಡೆದಿಲ್ಲ. ಒಂದು ಟ್ರಾನ್ಸಿಟ್ ಹಾಸ್ಟೆಲ್‌ನಲ್ಲಿ ಹತ್ತು ಮಂದಿ ಉಳಿದುಕೊಳ್ಳುವ ವ್ಯವಸ್ಥೆ ಇದ್ದು, ಊಟ, ಬಿಸಿ ನೀರು, ಭದ್ರತೆ ಸೇರಿ ಎಲ್ಲ ವ್ಯವಸ್ಥೆ ಇದೆಯಾದರೂ ಇಲಾಖೆ ಪ್ರಚಾರ ಮಾಡದ ಕಾರಣ ಇಲ್ಲಿಗೆ ಯಾರೂ ಬರುತ್ತಿಲ್ಲ ಎಂದು ಹೇಳಲಾಗಿದೆ. ಜಯನಗರ, ಮೈಸೂರು ರಸ್ತೆ, ಕೋರಮಂಗಲ, ಶಂಕರಪುರ, ಕನಕಪುರ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ 12 ಟ್ರಾನ್ಸಿಟ್ ಹಾಸ್ಟೆಲ್ ಇರುವ ಮಾಹಿತಿ ಇಲ್ಲ ಎನ್ನಲಾಗಿದೆ.

ಸಂಪಂಗಿರಾಮನಗರ ದಲ್ಲಿರುವ ಯೂನಿವರ್ಸಿಟಿವು ಮನ್ ಅಸೋಸಿಯೇಷನ್ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಮಿಷನ್ ರೋಡ್‌ನಲ್ಲಿರುವ ಯಂಗ್ ವುಮನ್ ಕ್ರಿಶ್ಚಿಯನ್ ಅಸೋಸಿಯೇಷನ್ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ಜಯನಗರ 4ನೇ ಬ್ಲಾಕ್‌ನಲ್ಲಿರುವ ಆಲ್ ಇಂಡಿಯಾ ವುಮನ್ ಕಾನ್ಫರೆನ್ಸ್ ಉದ್ಯೋಗಸ್ಥ ಮಹಿಳೆಯರ ವಸತಿಗೃಹದಲ್ಲಿ ಆರಂಭವಾಗಿ ಆರು ತಿಂಗಳಲ್ಲಿ ೨೪ ಮಹಿಳೆಯರು ಸೌಲಭ್ಯ ಪಡೆದಿದ್ದು, ಉಳಿದ 9 ವಸತಿಗೃಹಗಳಲ್ಲಿ ಮಹಿಳೆಯರೇ ಭೇಟಿ ನೀಡಿಲ್ಲ.

ಪ್ರಚಾರದ ಕೊರತೆ

ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಉಳಿದುಕೊಳ್ಳಲು ವಸತಿಗೃಹಗಳ ಸೌಲಭ್ಯ ಎಂಬುದು ಗೊತ್ತಿಲ್ಲ. ಹೀಗಾಗಿ ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಮುಖ್ಯವಾಗಿ ಮಹಿಳೆಯರು ಮೆಜಸ್ಟಿಕ್, ಯಶವಂತಪುರ, ಶಾಂತಿನಗರ, ಜಯನಗರ ಸೇರಿದಂತೆ ವಿವಿಧ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೇ ಇಳಿಯುತ್ತಾರೆ.

ಪ್ರವೇಶ ಹೇಗೆ

ಪ್ರವೇಶ ಪರೀಕ್ಷೆ,ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದು ಮಹಿಳೆಯರು ಹತ್ತಿರದ ವಸತಿಗೃಹಕ್ಕೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ, ವಿಳಾಸ ಒಳಗೊಂಡ ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನಚೀಟಿ), ಪೋಷಕರ ಫೋನ್ ನಂಬರ್, ವಿಳಾಸ ನೀಡಬೇಕು. ನೋಂದಣಿಯಾದ ನಂತರ ರೂಮ್ ದೊರೆಯಲಿದೆ. ಒಂದು ಹಾಸ್ಟೆಲ್‌ನಲ್ಲಿ ೧೦ ಬೆಡ್‌ಗಳಿದ್ದು, ಒಬ್ಬರು ಮೇಲ್ವಿಚಾರಕರು, ಸೆಕ್ಯೂರಿಟಿ ಗಾರ್ಡ್ ಇರಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos