ಬಿಎಂಟಿಸಿ: ವಿಂಡೋ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು

ಬಿಎಂಟಿಸಿ: ವಿಂಡೋ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು

ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕ ಅಧಿಕಾರಕ್ಕೆ ಬರಲು ನೀಡಿದ ಇದು ಗ್ಯಾರಂಟಿಗಳನ್ನು ಈಗಾಗಲೇ ಬಹಳ ಅದ್ದೂರಿಯಾಗಿ ಜಾರಿಗೊಳಿಸಲಾಗಿದೆ, ಅದರಲ್ಲಿ ಒಂದಾದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿಕೊಡಲಾಗಿತ್ತು.

ಬೆಂಗಳೂರಿನಲ್ಲಿ ಹೆಚ್ಚಾಗಿ ಓಡಾಡಬೇಕೆಂದರೆ ಸಾರ್ವಜನಿಕರು ಬಳಸುವುದು ಬಿಎಂಟಿಸಿ ಬಸ್ ಅನ್ನು, ದಿನನಿತ್ಯ ಕೆಲಸಕ್ಕೆ ಹೋಗುವವರು ಹಾಗೂ ಶಾಲಾ ಕಾಲೇಜು ಇನ್ನಿತರ ಹೋರಾಟಕ್ಕೆ ಹೆಚ್ಚಾಗಿ ಬಿಎಂಟಿಸಿ ಬಸ್ಸಗಳನ್ನು ಅವಲಂಬಿತರಾಗಿರುತ್ತಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಬಸ್ ಗಳಲ್ಲಿ ರೆಗ್ಯುಲರ್ ಆಗಿ ಕೆಲಸ ಮಾಡುವವರಿಗೆ ಇಂಥ ದೃಶ್ಯಗಳು ಅಪರೂಪವಲ್ಲ. ಜಗಳ, ಕಿತ್ತಾಟ ಕೆಲವು ಸಲ ಹೊಡೆದಾಟ ನಡೆಯುತ್ತಿರುತ್ತವೆ. ಜಗಳ ಮಾಡೋರು ಅದರಲ್ಲಿ ಮಗ್ನರಾಗಿದ್ದರೆ ಮಿಕ್ಕಿದವರು ಪುಕ್ಕಟೆ ಮನರಂಜನೆ ತೆಗೆದುಕೊಳ್ಳುತ್ತಿರುತ್ತಾರೆ. ಮಹಿಳಾ ಪ್ರಯಣಿಕರುಇದಕ್ಕೆ ಅಪವಾದವೇನಲ್ಲ.

ನಿನ್ನೆ ರಾತ್ರಿ  ಮೆಜೆಸ್ಟಿಕ್ ನಿಂದ ಪೀಣ್ಯಕ್ಕೆ ಹೊರಟಿದ್ದ ಬಿಎಂಟಿಸಿ ಬಸ್ ನಲ್ಲಿ ಇಬ್ಬರು ಮಹಿಳೆಯರ ನಡುವೆ ಕಿತ್ತಾಟವಾಗಿದೆ. ವಿಂಡೋ ಸೀಟಿಗಾಗಿ ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆದಿದ್ದು ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯ ದೃಶ್ಯಗಳು ಪ್ರಯಾಣಿಕರ ಮೊಬೈಲ್ ನಲ್ಲಿ ಸರಿಯಾಗಿದೆ ವಿಡಿಯೋ ಹಾಲಿದಾಡುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos