ಮಹಿಳೆಯರ ಬೈಕ್ ರ‍್ಯಾಲಿ

ಮಹಿಳೆಯರ ಬೈಕ್  ರ‍್ಯಾಲಿ

ಮಾ.4, ನ್ಯೂಸ್ ಎಕ್ಸ್ ಪ್ರೆಸ್,ಬೆಂಗಳೂರು: ಸಖಿ ಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಬೈಕ್ ರ್ಯಾ ಲಿ ಯನ್ನು ಮಾ.10 ರಂದು ಹಮ್ಮಿಕೊಂಡಿದೆ. ರ್ಯಾ ಲಿ ಮಾ. 10ರಂದು ಬೆಳಗ್ಗೆ 6 ಗಂಟೆಗೆ ನಡೆಯಲಿದೆ. ಕಂಠೀರವ ಸ್ಟೇಡಿಯಂನಿಂದ ಆರಂಭಗೊಳ್ಳಲಿದ್ದು, ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ನಲ್ಲಿ ಮುಕ್ತಾಯಗೊಳ್ಳಲಿದೆ.

ಎಲ್ಲ ಬಗೆಯ ದ್ವಿಚಕ್ರ ವಾಹನಗಳನ್ನು ಹೊಂದಿರುವ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಖಿ ಸಮಾನ ಮನಸ್ಕರು ರೂಪಿಸಿದ ವೇದಿಕೆಯಾಗಿದ್ದು, ಪ್ರವಾಸ, ಸಾಹಸಕ್ರೀಡೆ, ಮಹಿಳೆಯರ ಸಬಲೀಕರಣ, ಶಿಕ್ಷಣ ಮತ್ತು ಉತ್ತೇಜನ ನೀಡುವ ವೇದಿಕೆಯಾಗಿದೆ. ಈ ರ್ಯಾ ಲಿ ಗೆ ಕನ್ನಡ ನಟಿ ವೈಷ್ಣವಿ ಚಂದ್ರನ್ ಮೆನನ್ ಚಾಲನೆ ಮತ್ತು ಇನ್ನಿತರರು ಚಾಲನೆ ನೀಡಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos