ಮಹಿಳೆಯ ಕೊಳೆತ ಶವ ಪತ್ತೆ

ಮಹಿಳೆಯ ಕೊಳೆತ ಶವ ಪತ್ತೆ

ಶಿವಮೊಗ್ಗ, ಜ. 3 : ಪಾರ್ಕಿಂಗ್ ಜಾಗದ ಸೆಕ್ಯುರಿಟಿಗೆ ಕೆಲವು ದಿನಗಳಿಂದ ಕೊಳೆತ ವಾಸನೆ ಬರುತ್ತಿದ್ದುದರಿಂದ ಸುತ್ತಮುತ್ತಲ ಜಾಗದಲ್ಲಿ ಯಾವುದಾದರೂ ಪ್ರಾಣಿ ಸತ್ತಿದೆಯೇ? ಎಂದು ಹುಡುಕಲಾಗಿತ್ತು. ಆದರೆ, ಏನೂ ಪತ್ತೆಯಾಗಿರಲಿಲ್ಲ. 2 ದಿನಗಳಿಂದ ಕಾರಿನ ಕಡೆಯಿಂದ ಕೊಳೆತ ವಾಸನೆ ಹೆಚ್ಚಾಗಿ ಬರುತ್ತಿದ್ದುದರಿಂದ ಅನುಮಾನಗೊಂಡ ಪಾರ್ಕಿಂಗ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದರು.
10 ದಿನಗಳಿಂದ ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನಿಂದ ಗಬ್ಬುವಾಸನೆ ಬರತೊಡಗಿತ್ತು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ.

ಶಿವಮೊಗ್ಗದ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಡಿ. 22ರಿಂದ ಮಾರುತಿ ಓಮ್ನಿ ಕಾರೊಂದು ನಿಂತಿತ್ತು. ಸಾಮಾನ್ಯವಾಗಿ ಸುತ್ತಮುತ್ತಲಿನವರು ಅಥವಾ ಪ್ರಯಾಣಿಕರು ಅಲ್ಲಿ ಕಾರು ನಿಲ್ಲಿಸಿ ಹೋಗುವುದರಿಂದ ಯಾರೂ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ರೈಲ್ವೆ ಸ್ಟೇಷನ್ನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರನ್ನು 10 ದಿನಗಳಾದರೂ ಯಾರೂ ತೆಗೆದುಕೊಂಡು ಹೋಗಿರಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos