ಅಪರಿಚಿತ ಮಹಿಳೆ ಸಾವು

ಅಪರಿಚಿತ ಮಹಿಳೆ ಸಾವು

ಹಾಸನ, ಜೂನ್. 13: ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ರೈಲ್ವೆ ಹಳಿ ಮೇಲೆ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ರೈಲಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸುಮಾರು 55 ವರ್ಷದ ಅಪರಿಚಿತ ಮಹಿಳೆ ಶವ ಹಾಸನ- ಮೈಸೂರು ಮಾರ್ಗದ ಮೇಲೆ ಬಿದ್ದಿದ್ದು, ತಲೆ ಭಾಗಕ್ಕೆ ತೀವ್ರ ಗಾಯವಾಗಿದೆ. ಯಾವುದೋ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಸಾಧ್ಯತೆಯಿದ್ದು, ಮೈಸೂರಿನಿಂದ ಅರಸೀಕೆರೆಗೆ ಪ್ರಯಾಣಿಸುವ ಟಿಕೆಟ್ ಸ್ಥಳದಲ್ಲಿ ದೊರಕಿದೆ. ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos