ನಡುರಸ್ತೆಯಲ್ಲಿ ಚಪ್ಪಲಿಯಲ್ಲಿ ಥಳಿಸಿದ ದಿಟ್ಟ ಮಹಿಳೆ…!

ನಡುರಸ್ತೆಯಲ್ಲಿ ಚಪ್ಪಲಿಯಲ್ಲಿ ಥಳಿಸಿದ ದಿಟ್ಟ ಮಹಿಳೆ…!

ಜಮ್ಷೆಡ್ ಪುರ, ಮೇ.8, ನ್ಯೂಸ್ ಎಕ್ಸ್ ಪ್ರೆಸ್:  ರಸ್ತೆಯಲ್ಲಿ ಮಹಿಳೆಯೊಬ್ಬಳು ವ್ಯಕ್ತಿಗೆ ಚಪ್ಪಲಿ ಏಟು ನೀಡ್ತಿದ್ದಳು. ನೆರೆದ ಜನ ಅದನ್ನು ನೋಡ್ತಿದ್ದರೆ ವಿನಃ ತಪ್ಪಿಸುವ ಪ್ರಯತ್ನ ಮಾಡಲಿಲ್ಲ. ಚಪ್ಪಲಿಯಿಂದ ಏಟು ತಿನ್ನುವುದನ್ನು ಬಿಟ್ಟು ಮತ್ತೇನು ಮಾಡಲೂ ವ್ಯಕ್ತಿಗೆ ಸಾಧ್ಯವಾಗಲಿಲ್ಲ. ಘಟನೆ ಜಾರ್ಖಂಡ್ ನ ಜಮ್ಶೆಡ್ಪುರದಲ್ಲಿ ನಡೆದಿದೆ. ಫೈಲೇಂದ್ರ ಮಹಾಂತೋ ಹೆಸರಿನ ವ್ಯಕ್ತಿ ಭ್ರಷ್ಟಾಚಾರ ವಿರೋಧಿ ಅಧಿಕಾರಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ. ಮಹಿಳೆಯೊಬ್ಬಳಿಂದ 50 ಸಾವಿರ ರೂಪಾಯಿ ಲಂಚ ನೀಡುವಂತೆ ಕೇಳಿದ್ದ ಎನ್ನಲಾಗಿದೆ. ಹಣ ನೀಡುವುದಾಗಿ ತನ್ನ ಕ್ಷೇತ್ರಕ್ಕೆ ಕರೆದ ಮಹಿಳೆ ನಕಲಿ ಅಧಿಕಾರಿಯನ್ನು ಹಿಡಿದಿದ್ದಾಳೆ. ನಂತ್ರ ಮನಸ್ಸಿಗೆ ಬಂದಂತೆ ಥಳಿಸಿದ್ದಾಳೆ. ಸ್ಥಳೀಯರು ಕೂಡ ಮಹಿಳೆಗೆ ನೆರವಾಗಿದ್ದು, ಫೈಲೇಂದ್ರ ಮೇಲೆ ದಾಳಿ ನಡೆಸಿದ್ದಾರೆ. ನಂತ್ರ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಒಂದು ಕಾರು ಹಾಗೂ ನಕಲಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ಅಧಿಕಾರಿ ಹೆಸರಿನಲ್ಲಿ ಎಷ್ಟು ಜನರಿಗೆ ಮೋಸ ಮಾಡಿದ್ದಾನೆಂಬುದು ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos