ದಾಖಲೆ ಇಲ್ಲದ 42 ಲಕ್ಷ ರೂ ವಶ

ದಾಖಲೆ ಇಲ್ಲದ 42 ಲಕ್ಷ ರೂ ವಶ

ಹುಬ್ಬಳ್ಳಿ, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಚುನಾವಣಾ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ  ಇಂದು ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 42 ಲಕ್ಷ ರೂ ಹಣವನ್ನು ಜಪ್ತಿ ಮಾಡಿದ್ದಾರೆ.

ಕುಂದಗೋಳ, ಚಿಂಚೋಳಿ ಕ್ಷೇತ್ರದಗಳಲ್ಲಿ ಮೇ.19ರಂದು ಉಪಚುನಾವಣೆ ನಡೆಯುತ್ತಿರುವುದರಿಂದ, ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ಬಿಗಿ ಬಂದೋಬಸ್ತ್ ನಲ್ಲಿ ತೊಡಗಿದ್ದರು. ಈ ವೇಳೆ ಹುಬ್ಬಳ್ಳಿ ತಾಲೂಕಿನ ಅಗಡಿ ಗ್ರಾಮದ ಬಳಿಯ ಚೆಕ್ ಪೋಸ್ಟ್ ನಲ್ಲಿ ಖಾಸಗೀ ಬ್ಯಾಂಕ್ ಹಣವೆಂದು 42 ಲಕ್ಷವನ್ನು ಸಾಗಿಸಲಾಗುವುದನ್ನು ಪತ್ತೆ ಹಚ್ಚಿದ್ದಾರೆ.

ಖಾಸಗೀ ಬ್ಯಾಂಕ್ ಗೆ ಹಣವೆಂದು ತಿಳಿಸಿದ ಬಗ್ಗೆ ದಾಖಲೆಯನ್ನು ತೋರಿಸುವಂತೆ ಅಧಿಕಾರಿಗಳು ವಾಹನದ ಚಾಲಕರಿಗೆ, ತಿಳಿಸಿದ್ದಾರೆ. ಈ ವೇಳೆ ಕೇವಲ ಎಕ್ಸಿಸ್ ಬ್ಯಾಂಕ್ ಗೆ ಸೇರಿದ ದಾಖಲೆಯನ್ನು ತೋರಿಸಿದ್ದಾರೆ. ಆದರೆ ಉಳಿದ 30 ಲಕ್ಷಕ್ಕೆ ದಾಖಲೆಯನ್ನು ತೋರಿಸಿಲ್ಲ. ಹೀಗಾಗಿ ಎಲ್ಲಾ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos