ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿಗೆ! ಬೆಳೆನಾಶ

ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿಗೆ! ಬೆಳೆನಾಶ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಗೆ ಕಾಫಿ, ಬಾಳೆ, ಅಡಿಕೆ, ಮೆಣಸು ಬೆಳೆ ನಾಶಗೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಕಳೆದ 1 ವಾರದಿಂದ ಗ್ರಾಮದಲ್ಲೇ ಬೀಡುಬಿಟ್ಟಿರುವ ಕಾಡಾನೆ ಹಿಂಡು ನಿರಂತರವಾಗಿ ಬೆಳೆ ನಾಶ ಮಾಡುತ್ತಿವೆ. ನಿನ್ನೆ ಕೂಡ ಕೃಷಿ ಜಮೀನುಗಳಿಗೆ ನುಗ್ಗಿ ಕಾಫಿ, ಬಾಳೆ, ಅಡಕೆ, ಮೆಣಸು ಬೆಳೆ ನಾಶಗೊಳಿಸಿವೆ.
ಆಲ್ದೂರು ವಲಯದ ಬನ್ನೂರು ಸಮೀಪ ಅರೆನೂರು ದುರ್ಗಕ್ಕೆ ಹೋಗುವ ದಾರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಕೊಂಡು ಹಾಕಿತ್ತು. ಸಕಲೇಶಪುರ ಆಲ್ದೂರು ಸಮೀಪ ಶಾರ್ಪ್ ಶೂಟರ್ ಒಬ್ಬರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದ ಘಟನೆ ನಡೆದ ಎರಡೇ ದಿನಕ್ಕೆ ಈ ಘಟನೆ ನಡೆದಿತ್ತು.
ಗಾಯಗೊಂಡಿದ್ದ ಆನೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ಅರವಳಿಕೆ ನೀಡುತ್ತಿದ್ದಾ ಏಕಾಏಕಿ ದಾಳಿ ನಡೆಸಿದ ಭೀಮ ಎಂಬ ಕಾಡಾನೆ ಮಲೆನಾಡ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಇದರಿಂದ ಸಾರ್ವಜನಿಕರು ಮತ್ತು ರೈತರು ಸರ್ಕಾರಕ್ಕೆ ಘೇರವು ಕೂಗಿ ಪ್ರತಿಭಟಿಸುವುದು ಕಂಡು ಬಂದಿತು.

ವರದಿಗಾರ: ಸ್ವಾಮಿ ಕಾರಿಗನೂರು

ಫ್ರೆಶ್ ನ್ಯೂಸ್

Latest Posts

Featured Videos