ವಿಕೆಟ್ ಕೀಪಿಂಗ್ ಗ್ಲೌಸ್ ಬಳಸಿರುವುದು ಚರ್ಚೆಗೆ ಗ್ರಾಸ್!

ವಿಕೆಟ್ ಕೀಪಿಂಗ್ ಗ್ಲೌಸ್  ಬಳಸಿರುವುದು ಚರ್ಚೆಗೆ ಗ್ರಾಸ್!

ನವದೆಹಲಿ, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್: ದಕ್ಷಿಣ ಆಫ್ರಿಕಾ ವಿರುದ್ಧ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.  ಮಾಜಿ ನಾಯಕ ಧೋನಿ ಪ್ಯಾರಾ ಸ್ಪೆಷಲ್ ಫೋರ್ಸ್ ಚಿನ್ಹೆಯಾದ ’ಬಲಿದಾನ್’ ಚಿತ್ರವನ್ನು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ನಲ್ಲಿ ಬಳಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 40ನೇ ಓವರ್ ನಲ್ಲಿ ಯಜುವೇಂದ್ರ ಚಹಲ್ ಬೌಲಿಂಗ್ ನಲ್ಲಿ ಆ್ಯಂಡಿಲೆ ಫೆಲುಕ್ವಾಯೋರನ್ನು ಧೋನಿ ಸ್ಟಂಪಿಂಗ್ ಮಾಡುವ ವೇಳೆ ಧೋನಿ ಗ್ಲೌಸ್ ನಲ್ಲಿ ಭಾರತೀಯ ಸೇನೆಯ ’ಬಲಿದಾನ್’ ಚಿನ್ಹೆ ಕಂಡುಬಂದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos