ಯಾರಿಗೆ ಒಲಿಯಲಿದೆ ಪ್ರಧಾನಿ ಪಟ್ಟ..?

ಯಾರಿಗೆ ಒಲಿಯಲಿದೆ ಪ್ರಧಾನಿ ಪಟ್ಟ..?

ನವದೆಹಲಿ, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಮಹಾ ಚುನಾವಣೆ ತೀರ್ಪಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲರ ಭವಿಷ್ಯ ಬಹಿರಂಗಗೊಳ್ಳಲಿದ್ದು, ಮತದಾರ ಪ್ರಭು ಯಾರ ಕೈಹಿಡಿದಿದ್ದಾನೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಲೋಕಸಭೆಗೆ ನಡೆದ 7ಹಂತದ ಮತದಾನದ ಕ್ಲೈಮ್ಯಾಕ್ಸ್ ಇಂದು ಹೊರಬೀಳಲಿದೆ. ಇದರೊಂದಿಗೆ ಮತದಾರಪ್ರಭು ಯಾರ ಕೈಹಿಡಿಯಲಿದ್ದಾನೆ, ಮುಂದಿನ 5 ವರ್ಷಗಳ ಕಾಲ ದೇಶದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬ ಕುತೂಹಲಕ್ಕೂ ಉತ್ತರ ದೊರೆಯಲಿದೆ.

ಒಟ್ಟು 43 ದಿನಗಳ ಕಾಲ 7 ಹಂತದಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯ ಮತ ಎಣಿಕೆ 8ಗಂಟೆಗೆ ಆರಂಭಗೊಳ್ಳಲಿದೆ. ಅದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಹೊರಬಿದ್ದಿರುವ ಚುನಾವಣಾ ಸಮೀಕ್ಷೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಬಹುಮತ ದೊರೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ವಿಪಕ್ಷಗಳು ಇದನ್ನ ನಂಬಿಲ್ಲ.

ದೇಶದ ಒಟ್ಟು 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಮತದಾನವಾಗಿದ್ದು, ತಮಿಳುನಾಡಿನ ವೆಲ್ಲೂರಿನಲ್ಲಿ ವೋಟಿಂಗ್ ಆಗಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿದ್ದ ಎನ್ ಡಿಎ, ಯುಪಿಎ, ಮಹಾಘಟಬಂಧನ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷ, ಮಿತ್ರಕೂಟಗಳ ಹಣೆಬರಹ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos