ಪ್ರಮುಖ ಖಾತೆಗಳು ಯಾರ ಪಾಲಿಗೆ?

ಪ್ರಮುಖ ಖಾತೆಗಳು ಯಾರ ಪಾಲಿಗೆ?

ಬೆಂಗಳೂರು, ಆ. 27: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಸಚಿವ ಸಂಪುಟವೂ ಕೂಡ ವಿಸ್ತರಣೆ ಆಗಿ ಖಾತೆ ಹಂಚಿಕೆಯೂ ಕೂಡ ಆಯಿತು. ಇದೆಲ್ಲದರ ನಡುವೆ ಕೆಲವು ಶಾಸಕರು ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ಬೇಸರಗೊಂಡಿದ್ದಾರೆ. ಇನ್ನೂ ಸಚಿವ ಸ್ಥಾನ ಸಿಕ್ಕಿರುವವರು ಕೂಡ ಸಿಕ್ಕಿರುವ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ 17 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಇನ್ನೂ ಸಂಪುಟ ವಿಸ್ತರಣೆ ಆಗಬೇಕಿರುವ ಹಿನ್ನಲೆಯಲ್ಲಿ ಪ್ರಮುಖ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ಈ ಪ್ರಮುಖ ಖಾತೆಗಳನ್ನು ಯಾರ್ಯಾರಿಗೆ ಹಂಚುತ್ತಾರೆ ಎಂಬುದು ಕುತೂಹಲವನ್ನು ಕೆರಳಿಸಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೂವರು ಉಪಮುಖ್ಯಮಂತ್ರಿಗಳು ಸೇರಿದಂತೆ 17 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಯಡಿಯೂರಪ್ಪ ಪ್ರಮುಖ ಖಾತೆ ಉಳಿಸಿಕೊಂಡಿದ್ದಾರೆ. ಈ ಖಾತೆಗಳನ್ನು ಯಾರ್ಯಾರಿಗೆ ನೀಡುತ್ತಾರೋ ಗೊತ್ತಿಲ್ಲ. ಆ ಸಮಯದಲ್ಲಿ ಅದೆಷ್ಟು ಶಾಸಕರು ಬೇಸರ ವ್ಯಕ್ತ ಪಡಿಸುತ್ತಾರೋ ಗೊತ್ತಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos