ಒಮ್ಮೆ ಅನರ್ಹರಾದವರು ಯಾರು ಗೆದ್ದಿಲ್ಲ, ಗೆಲ್ಲುವುದು ಇಲ್ಲ: ಶಿವರಾಜ್ ತಂಗಡಿ

ಒಮ್ಮೆ ಅನರ್ಹರಾದವರು ಯಾರು ಗೆದ್ದಿಲ್ಲ, ಗೆಲ್ಲುವುದು ಇಲ್ಲ: ಶಿವರಾಜ್ ತಂಗಡಿ

ಹೊಸಕೋಟೆ, ನ. 26: ರಾಜ್ಯದಲ್ಲಿ ಉಪಚುನಾವಣೆಯ ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳ ಮತಕೇಳುವ ಪ್ರಚಾರ ಬಲು ಜೋರಾಗಿಯೇ ನಡೆಯುತ್ತಿದ್ದರೆ ಮತ್ತೊಂದು ಕಡೆ ಕಣದಲ್ಲಿರುವವರ ಎದೆಯಲ್ಲಿ ಢವಢವ ಶುರುವಾಗಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಮತದಾರ ಭಾಂದವರನ್ನು ಮನವಲಿಸಲು ಯತ್ನಿಸುತ್ತಿದ್ದಾರೆ. ಅದರ ಜೊತೆ ಓಟ್ ಗಿಟ್ಟಿಸಿಕೊಳ್ಳುವ ಸಲುವಾಗಿ ಆಡಳಿತ ಹಾಗೂ ವಿಪಕ್ಷದವರು ಒಬ್ಬರಿಗೊಬ್ಬರು ಗೂಬೆ ಕೂರಿಸಿಕೊಂಡು ರಾಜಭೀದಿಯಲ್ಲಿ ಮಾನಮರ್ಯಾಧೆ ಅವರವರೇ ತೆಗೆದುಕೊಳ್ಳುತ್ತಿದ್ದಾರೆ.

ಪ್ರಿತಷ್ಠೆಯ ಕಣವಾಗಿರುವ ಹೊಸಕೊಟೆಯಲ್ಲಿ ಇವತ್ತು ಸಹಾ ಕೈ ಪಡೆ ಪ್ರಚಾರ ನಡೆಸಿತು. ಈವೇಳೆ ಕಮಲ ಅಭ್ಯರ್ಥಿ ಎಂಟಿಬಿ ನಾಗರಾಜು ವಿರುದ್ಧ ಮುಗಿಬಿದಿತ್ತು. ದೇಶದಲ್ಲಿ ಒಮ್ಮೆ ಅನರ್ಹರಾದವರು ಯಾರು ಗೆದ್ದಿಲ್ಲ, ಗೆಲ್ಲಲ್ಲ. 17 ಜನ ಶಾಸಕರು ಜೀವನ ಪರ್ಯಂತ ಅನರ್ಹರೇ ಎಂದೂ ಕೂಡ ಅರ್ಹರಾಗಲು ಸಾಧ್ಯವಿಲ್ಲ. ಬಿಜೆಪಿಗೆ ಸಹಾಯ ಮಾಡಿದವರನ್ನು  ಚೆನ್ನಾಗಿ ನೋಡಿಕೊಂಡು ನಂತರ ಕತ್ತು ಹಿಸುಕುವುದೇ ಅವರ ಜಾಯಮಾನ. ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪಧ್ಮಾವತಿ ಸುರೇಶ್ ಬಗ್ಗೆ ಲಘುವಾಗಿ ಮಾತನಾಡಿದರೆ ಹುಷಾರ್ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಎಂಟಿಬಿ ವಿರುದ್ಧ ಶಿವರಾಜ್ ತಂಗಡಗಿ ಗುಡುಗಿದರು.

ಬೋವಿ ಸಮಾಜಕ್ಕೆ ಯಡಿಯೂರಪ್ಪ ಸರ್ಕಾರ ಮೋಸ ಮಾಡಿದೆ. ಈಗಿನ ಸರ್ಕಾರದಲ್ಲಿ ನಾಲ್ವರು  ಶಾಸಕರಿದ್ದರು ಒಬ್ಬರನ್ನು ಮಂತ್ರಿ ಮಾಡಿಲ್ಲ. ಹಾಗಾಗೀ ಬೋವಿ ಜನಾಂಗ ಬಿಜೆಪಿಗೆ ಮತ ನೀಡಬಾರದೆಂದು ಶಿವರಾಜ್ ತಂಗಡಿಗಿ ಮತದಾರರಲ್ಲಿ ಮನವಿಮಾಡಿದರು. ಮಾಜಿ ಸಚಿವ ರೋಷನ್ ಬೇಗ್‌ಗೆ ಈ ಭಾರಿ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ಕಾರಣ ಇಷ್ಟೇ ಅವರ ಮೇಲೆ ಸಾಕಷ್ಟು ಕೇಸ್ ಗಳು ನಡೆಯುತ್ತಿವೆ. ಯಡಿಯುರಪ್ಪ ಹೊಸಕೋಟೆಯನ್ನು ದತ್ತುಪಡೆದುಕೊಳ್ಳುತ್ತೇನೆಂದು ಹೇಳುವ ಶೈಲಿ ಅದು ಕೇವಲ ಮಾತಿಗಿರುತ್ತದೆ. ಬಿಜೆಪಿಯವರು ಮಾಜಿ ಸಿಎಂ ಸಿದ್ದರಾಮಯ್ಯರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಮಲ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಸಮ್ಮಿಶ್ರ ಸರ್ಕಾರದಲ್ಲಿದ್ದ ಕೈ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದವರಿಗೆ ಕಮಲ ಪಡೆ ಐಟಿ, ಇಡಿ ಮೂಲಕ ಹೆದರಿ ಇಟ್ಲರ್ ರೀತಿ ರಾಜಕೀಯ ಮಾಡಲು ಹೊರಟಿದ್ದಾರೆ. ಬಿಜೆಪಿಯವರು ರಾಜಕೀಯದಲ್ಲಿ ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ. ಹೀಗಾಗಿ ಭೋವಿ ಜನಂಗಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ, ಹೀಗಾಗಿ ಕಾಂಗ್ರೆಸ್‌ಗೆ ಈ ಭಾರಿ ಚುನಾವಣೆಯಲ್ಲಿ ಮತ ಹಾಕಬೇಕೆಂದು ಮತದಾರರಲ್ಲಿ  ಮನವಿ ಮಾಡಿಕೊಂಡರು.

 

ಫ್ರೆಶ್ ನ್ಯೂಸ್

Latest Posts

Featured Videos