ಇವರಲ್ಲಿ ಯಾರಿಗೆ ಸಿಗುತ್ತೆ ಕೆಪಿಸಿಸಿ ಪಟ್ಟ..?

ಇವರಲ್ಲಿ ಯಾರಿಗೆ ಸಿಗುತ್ತೆ ಕೆಪಿಸಿಸಿ ಪಟ್ಟ..?

ಬೆಂಗಳೂರು, ಡಿ. 27: ದಿನೇಶ್ ಗುಂಡೂರಾವ್ ಅವರಿಂದ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸದ್ಯ ಡಿ.ಕೆ.ಶಿವಕುಮಾರ್ ಹೆಸರು ಪ್ರಚಲಿತದ ಹಿನ್ನೆಲೆಯಲ್ಲಿ, ಮತ್ತೊಬ್ಬ ನಾಯಕನಿಂದಲೂ ತೆರೆಮರೆಯಲ್ಲಿ ಲಾಬಿ ನಡೀತಿದೆ. ಅದೂ ಕೂಡ ನೇರವಾಗಿ ರಾಹುಲ್ ಗಾಂಧಿ ಮುಖಾಂತರ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ ನಡೆಸಲಾಗ್ತಿದೆ. ಈ ರೀತಿ ಲಾಬಿ ನಡೆಸುತ್ತಿರೋದು ಕಾಂಗ್ರೆಸ್ ಯುವ ನಾಯಕ, ಮಾಜಿ ಸಚಿವ ಕೃಷ್ಣಬೈರೇಗೌಡ.

ಕೃಷ್ಣಬೈರೇಗೌಡ, ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಹಾಗೂ ಕೃಷ್ಣಬೈರೇಗೌಡರ ನಡುವೆ ಕೆಪಿಸಿಸಿ ಅಧ್ಯಕ್ಷ ಗಾದಿಗೆ ತೆರೆಮರೆಯಲ್ಲಿ ಪೈಪೋಟಿ ನಡೀತಿದೆ. ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟು ಕೃಷ್ಣಬೈರೇಗೌಡ ಅಲ್ಲಿಂದಲೇ ಲಾಬಿ ನಡೆಸ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಎಐಸಿಸಿ ವೀಕ್ಷಕರ ಮುಖಾಂತರ ಡಿ.ಕೆ.ಶಿವಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸ್ತಿದ್ದಾರೆ. ಯಾವುದೇ ಘಳಿಗೆಯಲ್ಲೂ ಹೈಮಾಂಡ್ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಾರಥಿಯನ್ನ ನೇಮಕ ಮಾಡಬಹುದು. ಈ ಹಿನ್ನೆಲೆಯಲ್ಲಿ, ದೆಹಲಿಯಲ್ಲೇ ಬೀಡುಬಿಟ್ಟು ಕೃಷ್ಣಬೈರೇಗೌಡ ಲಾಬಿ ಆರಂಭ ಮಾಡಿದ್ದಾರೆ ಅಂತ ಪಕ್ಷದ ಮೂಲಗಳು ತಿಳಿಸಿವೆ.

 

ಫ್ರೆಶ್ ನ್ಯೂಸ್

Latest Posts

Featured Videos