ಮುಖದ ಸೌಂದರ್ಯ ಹಾಳಾಗಬಹುದು ಇರಲಿ ಗಮನ

ಮುಖದ ಸೌಂದರ್ಯ ಹಾಳಾಗಬಹುದು ಇರಲಿ ಗಮನ

ಬೆಂಗಳೂರು, ಸೆ. 16: ನಮ್ಮ ಮುಖದ ಸೌಂದರ್ಯ ಹಲವಾರು ಕಾರಣಗಳಿಂದ ಹಾಳಾಗುತ್ತದೆ. ಹೌದು, ಇದಕ್ಕೆ ಧೂಳು, ಸರಿಯಾದ ಆರೈಕೆ ಇಲ್ಲದೆ ಮಾತ್ರ ನಮ್ಮ ಸೌಂದರ್ಯ ಹಾಳಾಗೋದು ಅನ್ನೋದು ತಪ್ಪು. ಸೌಂದರ್ಯ ಹಾಳಾಗಲು ನೂರಾರು ಕಾರಣಗಳಿವೆ. ಇದರಲ್ಲಿ ಪ್ರಮುಕವಾಗಿ ದಿನ ನಿತ್ಯದ ನಮ್ಮ ನಿದ್ರೆ.

ನಿದ್ರಿಸುವ ಭಂಗಿ: ಒಂದು ದಿನದಲ್ಲಿ  8 ಘಂಟೆ ನಿದ್ದೆ ಮಾದಬೆಕು. ನೀವು

ಮಲಗುವ ಭಂಗಿ ಸರಿಯಾಗಿರದಿದ್ದರೆ ಅಂದರೆ ಅಂಗಾತ ಮಲಗಿದರೆ ಮುಖದ ಮೇಲೆ ಅಧಿಕ ಒತ್ತಡ ಉಂಟಾಗಿ ಮುಖದ ಮೇಲೆ ನೆರಿಗೆ ಉಂಟಾಗುತ್ತದೆ.

ಮೊಬೈಲ್ ಎಫೆಕ್ಟ್ : ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ಕಾಲಹರಣ ಮಾಡುತ್ತೇವೆ. ಮೊಬೈಲ್ ಸ್ಕ್ರೀನ್ ಮೇಲೆ ಅದೆಷ್ಟೋ ಕೊಳೆ ಶೇಖರವಾಗಿರುತ್ತದೆ ಅದು ತಿಳಿದು

ತಿಳಿಯದೆಯೋ ನಿಮ್ಮ ತ್ವಚೆಯ ಮೇಲೆ ಪರಿ

ಣಾಮ ಬೀರುತ್ತದೆ.

ಸೋಪು: ಸೋಪು ಬಳಸಿದರೆ ಮುಖದ ಮಾಯಿಶ್ಚರೈಸರ್ ಹಾಳಾಗುತ್ತದೆ. ಇದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದುದರಿಂದ ಸೋಪು ಬದಲು ಫೇಸ್

ವಾಶ್ ಬಳಸಿ.

ಧೂಮಪಾನ: ಧೂಮಪಾನ ಮಾಡುವುದರಿಂದ ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲ ಮುಖದ ಚರ್ಮದ ಮೇಲೂ ಪರಿಣಾಮ ಬೀರುತ್ತದೆ.

ತಲೆ ಹೊಟ್ಟು: ನಮ್ಮ ತಲೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ತಲೆಹೊಟ್ಟು ಉಂಟಾಗಿ ಅದು ಮುಖದ ಮೇಲೆ ಬಿದ್ದಾಗ ಗುಳ್ಳೆಗಳು ಏಳುತ್ತವೆ. ಆದುದರಿಂದ ವಾರದಲ್ಲಿ 4 ಬಾರಿ ತಲೆಗೆ ಸ್ನಾನ ಮಾಡಿ ಕೂದಲು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ ಇದರಿಂದ ನಿಮ್ಮ ಕೂದಲ ಜೊತೆ ಮುಖದ ಸೌಂದರ್ಯವು ಕೂಡ ಚನ್ನಗಿರುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos