“ಪ್ರಧಾನಿ ಮೋದಿ ಹಿಟ್ಲರ್‌ ಅಲ್ಲದಿದ್ದರೆ ಬೇರೇನು?”

“ಪ್ರಧಾನಿ ಮೋದಿ ಹಿಟ್ಲರ್‌ ಅಲ್ಲದಿದ್ದರೆ ಬೇರೇನು?”

ದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಪ್ರಧಾನಿ ಮೋದಿಯನ್ನು ಜರ್ಮನಿಯ ಡಿಕ್ಟೇಟರ್ ಅಡಾಲ್ಫ್​ ಹಿಟ್ಲರ್​ಗೆ ಹೋಲಿಸಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಹಿಟ್ಲರ್‌ ಅಲ್ಲದಿದ್ದರೆ ಬೇರೇನು? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅಥವಾ ಜಾಥಾಗಳು ಎಲ್ಲಾ ಕಾಲದಲ್ಲೂ ನಡೆದಿವೆ. ಆದರೆ, ಈ ಹಕ್ಕನ್ನು ಹಿಮ್ಮೆಟ್ಟಿಸಲು ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಪ್ರಯತ್ನಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಸೋಲಾಪುರದಲ್ಲಿ ಹೊಡೆದಿದ್ದಾರೆ. ಇದು ಪ್ರಜಾಪ್ರಭುತ್ವವೇ ಅಥವಾ ಸರ್ವಾಧಿಕಾರವೇ? ಎಂದು ಪ್ರಶ್ನಿಸಿದ್ದಾರೆ.

ಮೋದಿ ಅವರು ರಾತ್ರೋರಾತ್ರಿ ಸಿಬಿಐ ನಿರ್ದೇಶಕರನ್ನು ವಜಾ ಮಾಡಿದರು. ನೋಟು ಅಮಾನ್ಯೀಕರಣವನ್ನು ಹೇರಿದರು. ಇದು ಸರ್ವಾಧಿಕಾರಿ ಧೋರಣೆ ಅಲ್ಲವೇ? ಅವರು ಯಾರನ್ನಾದರೂ ಕೇಳಿದರೇ? ಕನಿಷ್ಠ ಹಣಕಾಸು ಸಚಿವರು ಅಥವಾ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಅವರನ್ನಾದರೂ ಕೇಳಿದರೇ? ಇಲ್ಲ. ಅವರಿಗೇನು ಅನ್ನಿಸಿತ್ತೋ, ಅದನ್ನಷ್ಟೇ ಮಾಡಿದ್ದಾರೆ. ಇದೆಲ್ಲವು ಸರ್ವಾಧಿಕಾರವನ್ನೇ ತೋರಿಸುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos