ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಹೆಣಗಾಡಿದ ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಹೆಣಗಾಡಿದ ಬಿಜೆಪಿ

ಕೊಲ್ಕತ್ತಾ, ಮಾ.25, ನ್ಯೂಸ್ ಎಕ್ಸ್ ಪ್ರೆಸ್: ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆರಿಸಲು ಬಿಜೆಪಿ ಹೆಣಗಾಡುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ದನವೊಂದಕ್ಕೆ ಅಭ್ಯರ್ಥಿಯಾಗುವಂತೆ ಹೇಳುವ ಶೀರ್ಷಿಕೆಯಿರುವ ಚಿತ್ರವೊಂದು ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದೆ.

ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಟ್ಟಲಾಗಿದ್ದ ದನವೊಂದರ ಹಗ್ಗವನ್ನು ಕೈಯಲ್ಲಿ ಹಿಡಿದಿರುವಂತೆ ತೋರಿಸಲಾಗಿದೆ. ಕೆಳಗೆ ಇರುವ ಬರಹದಲ್ಲಿ “ಲೋಕಸಭಾ ಚುನಾವಣೆಗೆ ನಿನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸುವ” ಎಂದು ಬರೆಯಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು indiatoday.in ವರದಿ ಮಾಡಿದೆ.

ಸದ್ಯ ಬಿಜೆಪಿ ರಾಜ್ಯದ 29 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆರಿಸಿದ್ದರೆ ಉಳಿದ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕಲು ಅದು ವಸ್ತುಶಃ ಹೆಣಗಾಡುತ್ತಿದೆ. ಸದ್ಯ ಪಕ್ಷ ಆರಿಸಿರುವ 29 ಅಭ್ಯರ್ಥಿಗಳ ಪೈಕಿ 25 ಹೊಸ ಮುಖಗಳಾಗಿವೆ.

ಅತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಎಲ್ಲಾ 42 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ತೃಣಮೂಲ ಕಾಂಗ್ರೆಸ್ಸಿನ ಎಲ್ಲಾ ಅಭ್ಯರ್ಥಿಗಳು ಪರಿಚಿತ ಮುಖಗಳಾಗಿರುವುದರಿಂದ ಅವರಿಗೆದುರಾಗಿ ಅಭ್ಯರ್ಥಿಗಳನ್ನು ಆರಿಸಲು ಬಿಜೆಪಿ ಹರಸಾಹಸ ಪಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos