ನಾವು ಹೊಸಕೋಟೆ ಬಿಟ್ಟು ಎಲ್ಲಿಯೂ ಹೋಗಲ್ಲ

ನಾವು ಹೊಸಕೋಟೆ ಬಿಟ್ಟು ಎಲ್ಲಿಯೂ ಹೋಗಲ್ಲ

ಹೊಸಕೋಟೆ, ಆ. 30: ನಾವು ಹೊಸಕೋಟೆ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಹೇಳಿದರು. ಅವರು ಹೊಸಕೋಟೆ ತಾಲ್ಲೂಕು ಹೀಮದುಳಿದ ವರ್ಗಗಳ ಒಕ್ಕೋಟ ಎಸ್.ಜೆ.ಆರ್.ಎಸ್ ಕನ್ವೇಷನ್ ಹಾಲಲ್ಲಿ ಏರ್ಪಡಿದ್ದ ಅಭಿನಂದನಾ ಸಮಾರಂಭ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸವ್ಮರಂಭವನ್ನು ಉದ್ಘಾಟಿಸಿ ಮಾತನಾಡಿ. ಬಚ್ಚೇಗೌಡರ ಮಗ ಹೊಸಕೋಟೆ ಬಿಟ್ಟು ಬಾಗೆಪಲ್ಲಿ, ದೊಡ್ಡಬಳ್ಳಾಪುರ ಹಾಗೆ ಈಗೆ ಚುನಾವಣೆಗೆ ನಿಲ್ಲುತ್ತಾರಂತೆ ಎಂದು ಊಹಾ ಪೂಹಗಳು ಎದ್ದಿವೆ. ಒಂದಂತ್ತು ನೀಜ ನಾವು ನಮ್ಮ ಮಗ ಹೊಸಕೋಟೆ ತಾಲ್ಲೂಕು ಮತ್ತು ನಮ್ಮನ್ನು ನಂಬಿದ ಜನತೆಯನ್ನು ಬೀಟ್ಟು ಎಲ್ಲಿಗೂ ಹೋಗುವ ಪ್ರಶ್ನೆಯೇ ಇಲ್ಲ. ಕಳೆದ ದಿನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಬೀಕರ ಮಳೆ ಹಾನಿಯಿಂದ ದೇಶದ ಕರ್ನಾಟಕ, ಕೇರಳ, ಮಹಾರಾಷ್ಟ್ರ,ಗುಜರಾತ್ಮ,ಹಿಮಾಚಲ ಪ್ರದೇಶಗಳಲ್ಲಿ 300 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ನೂರಕ್ಕು ಹೆಚ್ಚು ಜನ ಪ್ರಾಣ ಕಳೆದುಕೊಂಡು, ನೂರಾರು ಧನಕರುಗಳು ನೀರಲ್ಲಿ ಕೊಚ್ಚಿ ಹೋಗಿವೆ. ಸತ್ತ ಎಲ್ಲರಿಗೂ ಮೊದಲು ಅವರುಗಳ ಆತ್ಮಕ್ಕೆ ಶಾಂತಿಯನ್ನು ಕೋರೊಣ, ಹಾಗೇಯೆ ನನ್ನನ್ನು ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷ ಎಂಭತ್ತು ಸಾವಿರಗಳ ಮತಗಳನ್ನು ನೀಡಿದ ನೀಮಗೆ ಮೊದಲು ಧನ್ಯವಾದಗಳನ್ನು ಹೇಳಬೇಕು.

ಹಿಂದುಳಿದ ವರ್ಗಗಳ ಒಕ್ಕೂಟದಿಂದ ಅಭಿನಂದನೆ ಸಮಾರಂಭವನ್ನು ಮಾಡುತ್ತಿರುವುದು ನಮಗೆ ಮತ್ತು ತಾಲ್ಲೂಕಿನ ಎಲ್ಲಾ ಕಾರ್ಯಕರ್ತರಿಗೆ ಸಂತೋಷವನ್ಮ್ನಂಟು ಮಾಡಿದೆ. ಬಚ್ಚೇಗೌಡ ಮೋದಿ ಮತ್ತು ಶಾ ರವರು ಇರುವವರೆಗೂ ಯಾರು ಈ ದೇಶವನ್ನು ಏನು ಅಗಲು ಮಾಡಲು ಬಿಡುವುದಿಲ್ಲ ರೈತರಿಗಾಗಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ಅವರ ಖಾತೆ 6 ಸಾವಿರ ಹಣವನ್ನು ತುಂಬುತ್ತಿದೆ. ಹಾಗೇ ರಾಜ್ಯ ಸರ್ಕಾರ ನಾಲ್ಕು ಸಾವಿರಗಳನ್ನು ನೀಡುತ್ತಿದೆ.70 ದಶಕಗಳ ನಂತರ ಕಾಶ್ಮಿರ ರ‍್ಟಿಕಲ್ 370 ಯನ್ನು ರದ್ದು ಮಾಡುವ ದೇಶದಲ್ಲಿ ಏಕತೆಯನ್ನು ಸಾರಿದ ನಮ್ಮ ಮೋದಿಯವರು  ಇರುವವರೆಗೂ ಕಾಂಗ್ರೆಸ್ ನ ಆಟ ನಡೆಯೊಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯ ಯುವ ಮೋರ್ವಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮಾತನಾಡಿ ನಾವುಗಳ ಉಸಿರುಉವ ತನಕ ಹೊಸಕೋಟೆಯನ್ನು ಬೀಟ್ಟು ಬೇರೆ ಕಡೆ ಹೋಗುವ ಪ್ರಶ್ನೇಯೆ ಇಲ್ಲ. ಯಾರ ಮಾತುಗಳಿಗೂ ಕಿವಿಗೊಡಬೇಡಿ ಇವೇಲ್ಲ ಉಹಾಪೋಹ ನಾವು ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಕಳೆದ ಚುನಾವಣೆಯಲ್ಲಿ ಅಲ್ಪ ಸ್ವಲ್ಪ ಮತಗಳಿಂದ ಸೋತಿದ್ದೇವೆ ಮೂಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಒಕ್ಕೋಟದ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ನಾವು ಕಳೆದ 30 ವರ್ಷಗಳಿಂದಲೂ ಬಚ್ಚೇಗೌಡರ ಗರಡಿಯಲ್ಲಿ ಬೆಳೆದಿದ್ದೇವೆ. ತಾಲ್ಲೂಕಿನ ಅನೇಕ ಹಿಂದುಳಿದ ವರ್ಗಗಳ ಅವರ ಅಧಿಕಾರವಧಿಯಲ್ಲಿ ಎಲ್ಲ ಧರ್ಮಗಳನ್ನು ಸಮಾನೆತೆಯಿಂದ ಕಂಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾ,ಅಧ್ಯಕ್ಷ ಸಿ.ಮಂಜುನಾಥ್, ಬಿ.ಎಂ ನಾರಾಯಣಸ್ವಾಮಿ, ಟಿಎಪಿಎಂಎಸ್ ಅಧ್ಯಕ್ಷ ಟಿ.ಸೋಣ್ಣಪ್ಪ, ಹೆಚ್.ಜೆ ಶ್ರೀನಿವಾಸ್, ನಿವೃತ್ತ ತಹಶೀಲ್ದಾರ್ ನಾರಾಯಣಸ್ವಾಮಿ, ಬಿ.ಎನ್ ಗೋಪಾಲಗೌಡ, ತಮ್ಮೇಗೌಡ ಇದ್ದರು. ನಂತರ ಹಿಂದುಳಿದ ವರ್ಗಗಳ ನಾಯಕರುಗಳಿಗಳಿಗೆ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು

 

 

 

ಫ್ರೆಶ್ ನ್ಯೂಸ್

Latest Posts

Featured Videos