ಡಿಸೆಂಬರ್ 31ರಿಂದ ವಿಂಡೋಸ್ ಗಳಲ್ಲಿ ‘ವಾಟ್ಸಾಪ್’ ಕಾರ್ಯ ನಿರ್ವಹಿಸುದಿಲ್ಲ..!?

ಡಿಸೆಂಬರ್ 31ರಿಂದ ವಿಂಡೋಸ್ ಗಳಲ್ಲಿ ‘ವಾಟ್ಸಾಪ್’ ಕಾರ್ಯ ನಿರ್ವಹಿಸುದಿಲ್ಲ..!?

ವಾಷಿಂಗ್ಟನ್, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಿಂದ ಕೆಲಸ ನಿರ್ವಹಿಸಬಲ್ಲ ಮೊಬೈಲ್ ವಾಟ್ಸಾಪ್ ಡಿಸೆಂಬರ್ 31‌ ರಿಂದ ತನ್ನ ಕಾರ್ಯ ನಿಲ್ಲಿಸಲಿದೆ ಅಂಥ ವಾಟ್ಸಾಪ್ ತಿಳಿಸಿದೆ. ವಿಂಡೋಸ್ ಎಲ್ಲಾ ವರ್ಶನ್ ಗಳಿಗೂ ಈ ತೀರ್ಮಾನ ಅನ್ವಯಿಸುತ್ತದೆ. ಇದೇ ವೇಳೆ ವಾಟ್ಸಾಪ್ ಬಿಟಾ ವಾಚರ್ ಡಬ್ಲ್ಯೂ ಎ ಬಿಟೆಲ್ ಇನ್ಫೋ ಒಂದು ಸುಳಿವು ನೀಡಿದ್ದು, ಯುನಿವರ್ಸಲ್ ವಿಂಡೋಸ್ ಪ್ಲಾಟ್ ಫಾಮ್೯ ಆಪ್ ಅಭಿವೃದ್ಧಿ ಪಡಿಸಲಾಗುತ್ತದೆ. ಇದು ವಿಂಡೋಸ್ ಡೆಸ್ಕ್ ಟಾಪ್ ಮತ್ತು ವಿಂಡೋಸ್ ಫೋನ್ ಫ್ಲಾಟ್ ಫಾರಂಗಳಲ್ಲಿ ಕೆಲಸ ನಿರ್ವಹಿಸಲಿದೆ. ವಾಟ್ಸಾಪ್ ವಕ್ತಾರರು ಹೇಳಿರುವಂತೆ, ವಿಂಡೋಸ್ ಪ್ಲಾಟ್ ಫಾರಂ ಅಪ್ಡೇಟ್ಸ್ ಜೂನ್ ಗೆ ಕೊನೆಗೊಳ್ಳಲಿದೆ. ಮೈಕ್ರೋಸಾಫ್ಟ್ ಸಂಸ್ಥೆ ಇತ್ತೀಚೆಗೆ ತೆಗೆದುಕೊಂಡು ನಿರ್ಧಾರದಿಂದ ವಿಂಡೋಸ್ ಪ್ಲಾಟ್ ಫಾಮ್೯ ನಲ್ಲಿ ಕೆಲಸ ನಿಲ್ಲಿಸಲಿದೆ. ಅಲ್ಲಿಯ ತನಕ ಅಂದ್ರೆ ಡಿಸೆಂಬರ್ ಅಂತ್ಯದವರೆಗೂ ವಾಟ್ಸಾಪ್ ಅಭಾದಿತ.

ಫ್ರೆಶ್ ನ್ಯೂಸ್

Latest Posts

Featured Videos