ಸಿಲಿಕಾನ್‌ ಸಿಟಿ ನೀರಿನ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ!

ಸಿಲಿಕಾನ್‌ ಸಿಟಿ ನೀರಿನ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ!

ಬೆಂಗಳೂರು: ಬೆಂಗಳೂರಿನ ನೀರಿನ ಪರಿಸ್ಥಿತಿ ಭೀಕರವಾಗಿದ್ದು, ಸರ್ಕಾರ ಕೂಡ ಸೂಕ್ತವಾಗಿ ನೀರನ್ನ ಈಗ ಜನರಿಗೆ ಒದಗಿಸಲು ಹಲವು ರೀತಿಯ ಕ್ರಮ ಕೈಗೊಂಡಿದೆ. ಹಾಗೇ ವಾಟರ್ ಟ್ಯಾಂಕರ್‌ಗಳ ಮಾಫಿಯಾಗೆ ಕೂಡ ಬ್ರೇಕ್ ಹಾಕುತ್ತಿದೆ. ಹೀಗಿದ್ದಾಗಲೇ ಬೆಂಗಳೂರಿನ ಅಂತರ್ಜಲ ವೃದ್ಧಿಗೆ ಇದೀಗ ಮಹತ್ವದ ಕ್ರಮ ಕೈಗೊಂಡಿದೆ. ಈ ಮೂಲಕ ಬೆಂಗಳೂರಿನ ಜನರಿಗೆ ಭರಪೂರವಾಗಿ ಕುಡಿಯುವ ನೀರು ಸಿಗುವಂತೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ..

ತುಂಬಿ ತುಳುಕಲಿವೆ ಕೆರೆಗಳು! ಬೆಂಗಳೂರಿನ ನೀರಿನ ಬಿಕ್ಕಟ್ಟು ತೀವ್ರವಾದ ಕಾರಣ, ಸಿಲಿಕಾನ್ ಸಿಟಿಯಲ್ಲಿ ಇದೀಗ ಬೋರ್ ನೀರಿನ ಮಟ್ಟವನ್ನು ಹೆಚ್ಚಿಸಲು ಬೆಂಗಳೂರು ಜಲ ಮಂಡಳಿ ಭರ್ಜರಿ ನಿರ್ಧಾರವನ್ನ ಇದೀಗ ಕೈಗೊಂಡಿದೆ. ಅದರಲ್ಲೂ ಮಳೆಯೇ ಬೀಳದ ಕಾರಣಕ್ಕೆ ಒಣಗಿ ಬರಡಾಗಿ ಹೋಗಿರುವಂಥ ಬೆಂಗಳೂರಿನ ಕೆರೆಗಳಿಗೆ ಮತ್ತೆ ಜೀವ ನೀಡಲು ಇದೀಗ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಜನರು ನೀರೇ ಇಲ್ಲ ಅಂತಾ ಪರದಾಡುವ ಸಮಯದಲ್ಲಿ ಒಣಗಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನ ಪೂರೈಕೆ ಮಾಡಲು ಮಹತ್ವದ ನಿರ್ಧಾರ ಮಾಡಲಾಗಿದೆ.

ಈ ಮೂಲಕ ಬೆಂಗಳೂರಿನ ಕೆರೆಗಳು ಮತ್ತೆ ತುಂಬಿ ತುಳುಕುವುದು ಬಹುತೇಕ ಪಕ್ಕಾ ಆಗುತ್ತಿದೆ. ನೀರಿಗಾಗಿ ಬೆಂಗಳೂರಿಗರ ಪರದಾಟ ಬೆಂಗಳೂರಿನ ಯಾವ ಭಾಗದಲ್ಲೂ ನೀರು ಸಿಗುತ್ತಿಲ್ಲ, ಮಳೆ ಇಲ್ಲದ ಕಾರಣ ಬೆಂಗಳೂರಿನಲ್ಲಿ ಶೇಕಡಾ 50 ರಷ್ಟು ಬೋರ್‌ವೆಲ್ ಸಂಪೂರ್ಣ ಬತ್ತಿ ಹೋಗಿವೆ. ಇದೇ ಕಾರಣಕ್ಕೆ ಅಂತರ್ಜಲ ಮರುಪೂರಣ ಮಾಡಲು ಒಣಗುತ್ತಿರುವ ಕೆರೆಗಳಿಗೆ ಪ್ರತಿ ದಿನಕ್ಕೆ 1,300 ಮಿಲಿಯನ್ ಲೀಟರ್ ಶುದ್ಧೀಕರಿಸಿದ ನೀರನ್ನ ಬಿಡಲು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರಂತೆ. ಈ ಮೂಲಕ ಬೆಂಗಳೂರಿನಲ್ಲಿ ಒಂದಷ್ಟು ನೀರಿನ ಪರಿಸ್ಥಿತಿ ಸುಧಾರಿಸುವಂತೆ ಮಾಡೋದಕ್ಕೆ ಈಗ ಕ್ರಮ ಕೈಗೊಳ್ಳಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos