ನೀರಿನ ಆಭಾವ ಬೆಂಗಳೂರು ನಿವಾಸಿಗಳ ಗೋಳು ಒಂದಾ ಎರಡಾ!

ನೀರಿನ ಆಭಾವ ಬೆಂಗಳೂರು ನಿವಾಸಿಗಳ ಗೋಳು ಒಂದಾ ಎರಡಾ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೀಕರ ಬರ ಆವರಿಸಿದೆ. ಹನಿ ನೀರಿಗಾಗಿಯೂ ಜನ ಪರದಾಡುತ್ತಿದ್ದಾರೆ. ಕುಡಿಯಲು ಅಲ್ಲ ತೊಳೆಯಲು ಕೂಡ ನೀರಿಲ್ಲ. ದೈನಂದಿನ ಕಾರ್ಯಗಳಿಗೂ ಸಮಸ್ಯೆ ಎದುರಾಗಿದೆ. ಬೆಂಗಳೂರಿನ ಕೆಲ ನಿವಾಸಿಗಳು ನೀರಿಲ್ಲದೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನ ಬಿಚ್ಚಿ ಅಳಲು ತೋಡಿಕೊಂಡಿದ್ದಾರೆ. ತಿಂಗಳಿಗೆ ಐದು ಬಾರಿ ಮಾತ್ರ ಸ್ನಾನ, ಅಡುಗೆ ಮಾಡಿದರೆ ಪಾತ್ರೆ ತೊಳೆಯಲು ನೀರು ಬೇಕೆಂದು ಆರ್ಡರ್ ಮಾಡಿ ಊಟ-ತಿಂಡಿ, ಕುಡಿಯುವ ನೀರಿಲ್ಲವೆಂದು ಸಂಸ್ಕರಿಸಿದ ನೀರನ್ನೇ ಬಳಕೆ, ಹೀಗೆ ಒಂದಾ ಎರಡಾ ನೀರಿಲ್ಲದ ಕಾರಣ ಬೆಂಗಳೂರಿನ ಬಹುತೇಕ ಏರಿಯಾದ ಜನರು ನರಕ ಅನುಭವಿಸುತ್ತಿದ್ದಾರೆ.

ಬಾಬುಸಾಪಾಳ್ಯದ ನಿವಾಸಿಗಳು ತಮ್ಮ ದೈನಂದಿನ ಬಳಕೆಗಾಗಿ ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ಕಳೆದೆರಡು ತಿಂಗಳಿಂದ ತೀವ್ರ ಆರ್ಥಿಕ ಹೊಡೆತ ಬಿದ್ದಿದೆ. “ನಮಗೆ ಪ್ರತಿನಿತ್ಯ ನಾಲ್ಕು ಟ್ಯಾಂಕರ್‌ ನೀರು ಬೇಕಾಗುತ್ತದೆ. ಆದರೆ ನಮಗೆ ಒಂದು ಅಥವಾ ಎರಡು ಟ್ಯಾಂಕರ್ ನೀರು ಮಾತ್ರ ಸಿಗುತ್ತಿದೆ. ಕಳೆದ ಎರಡು-ಮೂರು ತಿಂಗಳಿಂದ ನಾವು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ”ಎಂದು ನಿವಾಸಿಯೊಬ್ಬರು ಹೇಳಿದರು.

ಈ ಪ್ರದೇಶದ ಅಪಾರ್ಟ್‌ಮೆಂಟ್‌ನ ನಿವಾಸಿ ಮಹಿಳೆಯೊಬ್ಬರು ನೀರಿನ ಸಮಸ್ಯೆಯ ಬಗ್ಗೆ ಮಾತನಾಡಿದ್ದು “ನಮಗೆ ಮಗು ಇದೆ, ತುಂಬಾ ಕಷ್ಟ, ಟ್ಯಾಂಕರ್‌ಗಳು ಬರುತ್ತಿಲ್ಲ, ಸರ್ಕಾರವು ಬೆಲೆಗಳನ್ನು ಕಡಿಮೆ ಮಾಡಿದೆ, ಆದರೆ ಅವು ಬರುತ್ತಿಲ್ಲ, ಅವರು ಬಂದರೂ ನೀರು ಬರುತ್ತಿಲ್ಲ. ನೀರಿನ ಸಮಸ್ಯೆಗೆ ಯಾವಾಗ ಪರಿಹಾರ ಸಿಗುತ್ತದೆ, ನಾವು ಯಾವಾಗ ಸಾಮಾನ್ಯ ಜೀವನಕ್ಕೆ ಮರಳುತ್ತೇವೆ ಎಂದು ನನಗೆ ತಿಳಿದಿಲ್ಲ ಎಂದರು.”

ನಾನು 15 ವರ್ಷಗಳಿಂದ ಇಲ್ಲಿದ್ದೇನೆ. ನಾನು ಯಾವುದೇ ಸರ್ಕಾರದಿಂದ ಇಂತಹ ಕ್ರಮಗಳನ್ನು ನೋಡಿಲ್ಲ ಎಂದು ಅವರು ಹೇಳಿದರು, ಜನರು ಕುಡಿಯುವ ನೀರಿಗಾಗಿ ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು. ಇನ್ನು ಮತ್ತೋರ್ವ ನಿವಾಸಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ 5 ಬಾರಿ ಸ್ನಾನ ಮಾಡಿದ್ದೇನೆ ಎಂದು ಅಳಲು ತೋಡಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos