ಕತ್ತರಿಸಿದಾಗಲ್ಲ, ಖರೀದಿಸುವಾಗಲೂ ಕಣ್ಣಲ್ಲಿ ನೀರು

ಕತ್ತರಿಸಿದಾಗಲ್ಲ, ಖರೀದಿಸುವಾಗಲೂ ಕಣ್ಣಲ್ಲಿ ನೀರು

ಬೆಂಗಳೂರು, ನ. 29:  ದಿನಗಳೆದಂತೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಟೊಮೆಟೋ ಬೆನ್ನಲ್ಲೇ ಇದೀಗ ಈರುಳ್ಳಿ ಕೂಡ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.ಹೌದು.. ಸಿಲಿಕಾನ್ ಸಿಟಿಯಲ್ಲಿ ಈರುಳ್ಳಿ ದರ 1೦೦ ಗಡಿ ಕೂಡ ದಾಟಿದ್ದು, ಪ್ರತೀ ಕೆಜಿಗೆ 11೦ ರಿಂದ 12೦ ರೂಗಳಿಗೆ ಏರಿಕೆಯಾಗಿದೆ. ಇದೇ ಕಾರಣಕ್ಕೆ ಪ್ರಮುಖ ಹೊಟೆಲ್ ಗಳಲ್ಲಿ ಈರುಳ್ಳಿಗೆ ಖಾದ್ಯಗಳಿಗೆ ಅಲ್ಪ ವಿರಾಮ ಹಾಕಲಾಗಿದೆ.

ನಗರದ ಯಶವಂತಪುರ ಎಪಿಎಂಸಿ ಯಾರ್ಡ್ನಲ್ಲಿಯೇ ಪ್ರತೀ ಕೆಜಿ ಈರುಳ್ಳಿ 90 ರೂ ಬಿಕರಿ ಮಾಡಲಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ110 ರಿಂದ 12೦ ರೂಗೆ ಮಾರಾಟ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಬಹುತೇಕ ಹೊಟೆಲ್ ಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಕೆ ಮಾಡುವ ಖಾದ್ಯಗಳ ತಯಾರಿಯನ್ನು ಮರು ಪರಿಶೀಲಿಸಲಾಗುತ್ತಿದೆ.

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಶತಕದಾಟಿದ್ದು, ಜಯನಗರ, ಜೆಪಿ ನಗರ, ಕಮರ್ಷಿಯಲ್ ಸ್ಟ್ರೀಟ್, ಎಂಜಿ ರಸ್ತೆ, ಹಲಸೂರಿನಲ್ಲಿ ಈರುಳ್ಳಿ ದರ 120 ರೂಗಳಾಗಿದ್ದು, ವಿಜಯನಗರ, ರಾಜಾಜಿನಗರ, ರಾಜರಾಜೇಶ್ವರಿನಗರ ಇತರೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 1೦೦ ರೂ. ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿಯೂ ಈರುಳ್ಳಿ ಬೆಲೆ ಗಗನ ಮುಟ್ಟಿದ್ದು, ಗುರುವಾರ ಪ್ರತೀ ಕೆಜಿ ಈರುಳ್ಳಿ ದರ ಸರಾಸರಿ 7೦ರೂಗೆ ಏರಿಕೆಯಾಗಿದೆ. ಇನ್ನು ಗೋವಾ ರಾಜಧಾನಿ ಪಣಜಿಯಲ್ಲಿ ದರ ಶತಕ ಭಾರಿಸಿದ್ದು, ಪ್ರತೀ ಕೆಜಿ ಈರುಳ್ಳಿ ದರ 1೦೦ ರೂ ದಾಟಿದೆ. ಪ್ರಸ್ತುತ ಪಣಜಿಯಲ್ಲಿ ಪ್ರತೀ ಕೆಜಿ ಈರುಳ್ಳಿಗೆ 11೦ರು ಇದ್ದು,  ಇದು ದೇಶದಲ್ಲೇ ಅತ್ಯಧಿಕ ಎಂದು ಹೇಳಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos