ತನ್ನಿಂದ ತಾನೇ ಬೋರ್ವೆಲ್ನಿಂದ ನೀರು

ತನ್ನಿಂದ ತಾನೇ ಬೋರ್ವೆಲ್ನಿಂದ ನೀರು

ಯಾದಗಿರಿ, ನ. 22 : ತನ್ನಿಂದ ತಾನೇ ಬೋರ್ ವೆಲ್ ಕೊರೆದರೂನೀರು ಬರೋದು ಡೌಟ್. ಆದರೆ, ಸತತ ನಾಲ್ಕು ವರ್ಷಗಳಿಂದ ದಿನದ 24 ಗಂಟೆಯೂ ತನ್ನಷ್ಟಕ್ಕೆ ತಾನೆ ನೀರು ಹೊರಬರುತ್ತಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಡಂಗೇರಾ ಬಿ. ಗ್ರಾಮದಲ್ಲಿ ಕುತೂಹಲಕಾರಿ ಬೋರ್ ವೆಲ್ ಇದೆ. ಬೇಸಿಗೆ, ಮಳೆ ಮತ್ತು ಚಳಿಗಾಲದಲ್ಲಿ ಎಗ್ಗಿಲ್ಲದೆ ತನ್ನಷ್ಟಕ್ಕೆ ತಾನೇ ಪಂಪ್ನಿಂದ ನೀರು ಚಿಮ್ಮುತ್ತದೆ. ಗ್ರಾಮಸ್ಥರ ತೀವ್ರ ಕುತೂಹಲಕ್ಕೆ ಕಾರಣ.ಈ ಗ್ರಾಮದಲ್ಲಿ 9 ಬೋರ್ವೆಲ್ ಗಳು ಇವೆ. ಆದರೆ ಅವುಗಳಲ್ಲಿ ಯಾವುದರಲ್ಲಿಯೂ ಈ ರೀತಿ ನೀರು ಬರುತ್ತಿಲ್ಲ. ಆದರೆ ಈ ಕೊಳವೆ ಬಾವಿಯಲ್ಲಿ ಮಾತ್ರ ಮೂರು ಕಾಲದಲ್ಲಿಯೂ ಸತತ 24 ಗಂಟೆಗಳ ಕಾಲ ನೀರು ತನ್ನಷ್ಟಕ್ಕೆ ತಾನೇ ಬರುತ್ತಿರುವುದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos