ಒಂದು ಲೋಟ ನೀರಿಂದ ‘ಅದೃಷ್ಟ’

ಒಂದು ಲೋಟ ನೀರಿಂದ ‘ಅದೃಷ್ಟ’

ಮೇ. 28, ನ್ಯೂಸ್‍ ಎಕ್ಸ್ ಪ್ರೆಸ್‍:  ಶಿವ ಪುರಾಣದ ಪ್ರಕಾರ ಪ್ರತಿದಿನ ಒಂದು ಲೋಟ ನೀರನ್ನು ಶಿವಲಿಂಗಕ್ಕೆ ಅರ್ಪಣೆ ಮಾಡುವುದ್ರಿಂದ ಶಿವ ಪ್ರಸನ್ನನಾಗ್ತಾನೆ. ಭಕ್ತರ ಇಚ್ಛೆ ಈಡೇರುತ್ತದೆ. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಓಂ ನಮಃ ಶಿವಾಯ ಮಂತ್ರ ಪಠಿಸಬೇಕು. ಜಾತಕದಲ್ಲಿ ಕಾಣಿಸಿಕೊಳ್ಳುವ ದೋಷ ವ್ಯಕ್ತಿಯ ‘ಅದೃಷ್ಟ’ದ ಮೇಲೆ ಪ್ರಭಾವ ಬೀರುತ್ತದೆ.  ನಮ್ಮ ಗ್ರಂಥದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಜಾತಕ ದೋಷವನ್ನು ಸರಳ ಉಪಾಯಗಳಿಂದಾಗಿ ಕಡಿಮೆ ಮಾಡಿ ಸಫಲತೆ ಕಾಣಬಹುದಾಗಿದೆ.

ರಾತ್ರಿ ಮಲಗುವ ವೇಳೆ ತಲೆ ಬದಿಯಲ್ಲಿ ತಾಮ್ರದ ಲೋಟದಲ್ಲಿ ನೀರನ್ನು ಇಟ್ಟು ಮಲಗಿ.  ಬೆಳಿಗ್ಗೆ ಎದ್ದ ತಕ್ಷಣ 7 ಬಾರಿ ಲೋಟವನ್ನು ತಲೆಗೆ ಸುಳಿದು ನಂತರ ನೀರನ್ನು ಮುಳ್ಳಿನ ಗಿಡದ ಬುಡಕ್ಕೆ ಹಾಕಿ. ಮನೆ ಬಳಿ ಮುಳ್ಳಿನ ಗಿಡವಿಲ್ಲವಾದ್ರೆ ಬೇರೆ ಯಾವುದಾದ್ರೂ ಗಿಡದ ಬುಡಕ್ಕೆ ಹಾಕಿ.

ಪ್ರತಿದಿನ ಬೆಳಿಗ್ಗೆ ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ. ಸ್ನಾನದ ನಂತರ ತಾಮ್ರದ ಲೋಟದಲ್ಲಿ ನೀರನ್ನು ಹಾಕಿ. ಇದಕ್ಕೆ ಕೆಂಪು ಹೂ, ಕುಂಕುಮ, ಅಕ್ಕಿಯನ್ನು ಹಾಕಿ ನಂತರ  ಸೂರ್ಯ ದೇವನಿಗೆ ಅರ್ಪಿಸಿ. ಓಂ ಸೂರ್ಯಾಯ ನಮಃ ಮಂತ್ರವನ್ನು ಪಠಿಸಿ. ಪ್ರತಿದಿನ ಹೀಗೆ ಮಾಡಿದ್ರೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos