ವಾರಿಯರ್ ನಿಸಾರ್ ಬೇಗ್ ಸಾವು

ವಾರಿಯರ್ ನಿಸಾರ್ ಬೇಗ್ ಸಾವು

ತುಮಕೂರು:ಅಪಘಾತ, ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರದಲ್ಲಿ ತೊಡಗಿದ್ದ ನಿಸಾರ್ ಬೇಗ್ (೬೭)ನಿಧನರಾದರು.
ನಿಸಾರ್ ಬೇಗ್ ಅಪಘಾತದಲ್ಲಿ ಗಾಯಗೊಂಡವರು ಮತ್ತು ಮೃತರನ್ನು ಸಾಗಿಸಲು ಆಂಬುಲೆನ್ಸ್ವೊಂದನ್ನು ದಾನವಾಗಿ ನೀಡಿದ್ದರು. ಅಪಘಾತದ ಸಂದರ್ಭದಲ್ಲಿ ಗಾಯಗೊಂಡವರನ್ನು ಅವರೇ ಆಂಬುಲೆನ್ಸ್ ಚಾಲನೆ ಮಾಡಿಕೊಂಡು ಬಂದು ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಸದಾ ಮುಂದಿರುತ್ತಿದ್ದರು.
ಆಂಬುಲೆನ್ಸ್ ನಿಸಾರ್ ಎಂದೇ ಹೆಸರುವಾಸಿಯಾಗಿದ್ದರು. ನಿಸಾರ್ ಬೇಗ್ ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ತುಮಕೂರು ಭಾಗದಲ್ಲಿ ಅಪಘಾತದಲ್ಲಿ ಮೃತಪಟ್ಟ ಹೊರ ರಾಜ್ಯಗಳ ಜನರ ಶವಗಳನ್ನು ಉತ್ತರ ಪ್ರದೇಶ, ಬಿಹಾರದವರೆಗೂ ಸಾಗಿಸಿದ್ದಾರೆ ಎಂದು ಕೊರೋನಾ ಸೋಂಕಿತ ಶವಗಳ ಅಂತ್ಯಸಂಸ್ಕಾರ ನಡೆಸುವ ತಂಡದ ಸದಸ್ಯ ತಾಜುದ್ದೀನ್ ಷರೀಫ್ ಸ್ಮರಿಸುವರು.

ಫ್ರೆಶ್ ನ್ಯೂಸ್

Latest Posts

Featured Videos