ಗಾಂಜಾ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ

ಗಾಂಜಾ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ

ಬೊಮ್ಮನಹಳ್ಳಿ, ಅ. 19: ಇದೇ ಪ್ರಪ್ರಥಮ ಬಾರಿಗೆ ನಗರದಲ್ಲಿ ಹೆಚ್ಚಾಗುತ್ತಿರುವ ಗಾಂಜಾ ಮಾರಾಟಗಾರರನ್ನು ಗುರ್ತಿಸಿ ಅವರನ್ನು ಕರೆದು ಖಡಕ್ ಎಚ್ಚರಿಕೆಯನ್ನು ನೀಡಿರುವ ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ ಇಶಾ ಪಂಥ್.

ಇಂದು ಆಡುಗೋಡಿ ಕೆಎಸ್‌ಆರ್‌ಪಿ ಗ್ರೌಂಡ್‌ನಲ್ಲಿ ಸುಮಾರು 75ಕ್ಕೂ ಹೆಚ್ಚು ಗಾಂಜಾ ಮಾರಾಟಗಾರರು ಹಾಗೂ ಏಜೆಂಟ್‌ಗಳನ್ನು ಗುರ್ತಿಸಿ ಅವರುಗಳನ್ನು ಪ್ರತ್ಯೇಕವಾಗಿ ಕರೆದು ಎಚ್ಚರಿಕೆ ನೀಡಿದರು. ಒಂದು ವೇಳೆ ಎಚ್ಚೆತ್ತುಕೊಳ್ಳದಿದ್ದಲ್ಲಿ ನಿಮ್ಮಗೆ ಠಾಣಾ ವ್ಯಾಪ್ತಿಯಲ್ಲಿಯೇ ತಕ್ಕ ಪಾಠ ಕಲಿಸಲಾಗುವುದು ಎಂದು ಡಿಸಿಪಿ ಇಶಾ ಪಂಥ್ ತಿಳಿಸಿದ್ದಾರೆ.

ಗಾಂಜಾ ಮಾರಾಟ ವೃತ್ತಿಯನ್ನು ಕೈ ಬಿಡಬೇಕೆಂದು ಸಮಾಜ ದ್ರೋಹದ ಇಂತಹ ನೀಚ ಕೆಲಸಕ್ಕೆ ಕೈ ಹಾಕಬಾರದೆಂದು ತಿಳಿ ಹೇಳಿದರು. ಗಾಂಜಾ ಮಾರಾಟದಿಂದ ಶಾಲಾ – ಕಾಲೇಜು ವಿದ್ಯಾರ್ಥಿಗಳು ಗಾಂಜಾ ವ್ಯಸನಿಗಳಾಗುತ್ತಿರುವುದು ಸಾಮಾಜಿ ಪಿಡುಗಾಗಿದೆ. ಇನ್ನು ಮುಂದೆ ಯಾರೇ ಆಗಲೀ, ಗಾಂಜಾ ಮಾರಾಟಕ್ಕೆ ಕೈ ಹಾಕಿದರೇ, ಅವರಿಗೆ ಉಳಿಗಾಲವಿಲ್ಲವೆಂದು, ಅಂತಹವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಆರ್. ವಾಸು, ಇನ್ಸ್ಪೆಕ್ಟರ್‌ಗಳಾದ ನಂದೀಶ್, ರಾಘವೇಂದ್ರ, ಚಂದ್ರಪ್ಪ, ಡಿಸಿಪಿ ಆಗ್ನೇಯ ವಿಭಾಗದ ಪೋಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos